ಅಹಮದಾಬಾದ್: ಎಲ್ಲಾ ಮನೆಗಳಲ್ಲಿ ಹೆಚ್ಚಾಗಿ ಇಲಿ ಇರುವುದು ಸಹಜ. ಹಾಗೆ ಗುಜರಾತ್ನ ಅಹಮದಾಬಾದ್ ಬಳಿ ಕರ್ಮಭೂಮಿ ಸೊಸೈಟಿಯಲ್ಲಿರುವ ಉದ್ಯಮಿ ವಿನೋದ್ ಅವರ ಮನೆ ಬುಧವಾರ ಬೆಳಗ್ಗೆ ಇಲಿಯಿಂದ ಬೆಂಕಿಗೆ ಆಹುತಿಯಾಗಿದೆ.
ಬುಧವಾರ ಬೆಳಗ್ಗೆ ಮನೆಯ ದೇವರ ಕೋಣೆಯಲ್ಲಿ ಪೂಜೆ ಮಾಡಿ ದೀಪ ಹಚ್ಚಿದ್ದರು. ಆದರೆ ಆ ಬಳಿಕ ದೀಪದ ಬತ್ತಿಯನ್ನು ಇಲಿ ಎಳೆದುಕೊಂಡು ಮನೆ ತುಂಬಾ ಓಡಾಡಿದ್ದರಿಂದ ಬೆಂಕಿ ಹೊತ್ತಿ ಕೊಂಡಿದೆ.
ಬಳಿಕ ಬಟ್ಟೆಗಳಿಗೂ ಬೆಂಕಿ ತಗುಲಿ ಇಡೀ ಮನೆಗೆ ಜ್ವಾಲೆ ಆವರಿಸಿ, 2 ಲಕ್ಷ ನಗದು ಸೇರಿ ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಹೋಗಿವೆ.
ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಹರಸಾಹಸ ಪಟ್ಟು ಬೆಂಕಿ ನಂದಿಸಿದರು.
ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾಗೂ 2 ಲಕ್ಷ ನಗದು ಸುಟ್ಟು ಹೋಗಿದೆ. ಆದರೆ ಯಾರಿಗೂ ಗಾಯಗಳಾಗಿಲ್ಲ ಎಂಬ ಮಾಹಿತಿ ದೊರಕಿವೆ.
إرسال تعليق