ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶತಮಾನ ಕಾಲ ಯಕ್ಷಗಾನ ಸಂಘ ನಡೆಸಿದ್ದು ಮಹಾ ಸಾಧನೆ: ಶಾಂತಾರಾಮ್ ಕುಡ್ವ

ಶತಮಾನ ಕಾಲ ಯಕ್ಷಗಾನ ಸಂಘ ನಡೆಸಿದ್ದು ಮಹಾ ಸಾಧನೆ: ಶಾಂತಾರಾಮ್ ಕುಡ್ವ

ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಪ್ರಶಸ್ತಿ ಪ್ರದಾನ



ಮಂಗಳೂರು: "ಯಕ್ಷಗಾನ ಸಂಘವನ್ನು ನಿರಂತರ ನೂರು ವರ್ಷಗಳಿಂದ ನಡೆಸಿಕೊಂಡು ಬಂದದ್ದು ಅಚ್ಚರಿ ಹಾಗೂ ಸಂಭ್ರಮದ ಸಂಗತಿ. ಪ್ರತಿಫಲಾಪೇಕ್ಷೆ ಇಲ್ಲದೆ ಕಲಾ ಸೇವೆ ಮಾಡುವ ಹವ್ಯಾಸಿ ತಾಳಮದ್ದಳೆ ಕಲಾವಿದರ ಕೊಡುಗೆ ಸ್ಮರಣೀಯ" ಎಂದು ಹಿರಿಯ ಹವ್ಯಾಸಿ ಅರ್ಥಧಾರಿ, ಸಂಘಟಕ, ಲೇಖಕ ಎಂ. ಶಾಂತಾರಾಂ ಕುಡ್ವ ನುಡಿದರು.


ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಪ್ರಶಸ್ತಿ- 7 ಸ್ವೀಕರಿಸಿ ಅವರು ಮಾತನಾಡಿದರು.


"ವಾಗೀಶ್ವರೀ ಸಂಘದ ಸದಸ್ಯರಲ್ಲಿ ಎಲ್ಲಾ ಜಾತಿ, ವರ್ಗ, ಅಂತಸ್ತಿನ ಕಲಾವಿದರಿದ್ದರೂ ತಾಳಮದ್ದಳೆಯಲ್ಲಿ ಪಾಲ್ಗೊಳ್ಳುವಾಗ ಯಾವ ಭೇಧ ಭಾವವೂ ಕಾಣಿಸದ ನಿಸ್ಪ್ರಹತೆ ಉಲ್ಲೇಖನೀಯ" ಎಂದು ಮಂಗಳೂರಿನ ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದ ಪ್ರಬಂಧಕ ಪಾಂಡುರಂಗ ಕಾಮತ್ ಅವರು ಶ್ರೀ ವಾಗೀಶ್ವರೀ ಶತಮಾನೋತ್ಸವದ ಸರಣಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 


"ಕಳೆದ ನಾಲ್ಕು ದಶಕಗಳಿಂದ ತಾಳಮದ್ದಳೆ ಅರ್ಥಧಾರಿಯಾಗಿ, ಸಂಘಟಕನಾಗಿ, ಬರಹಗಾರನಾಗಿ, ನಿರ್ದೇಶಕನಾಗಿ ಯಕ್ಷಗಾನರಂಗದಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ, ಕೊಂಕಣಿ ಯಕ್ಷಗಾನ ರಂಗದಲ್ಲಿ ಅನುಪಮ ಸೇವೆಗೈದಿರುವ ಮೂಡಬಿದರೆಯ ಎಂ. ಶಾಂತಾರಾಮ ಕುಡ್ವ ಅವರನ್ನು ಶಿವಪ್ರಸಾದ ಪ್ರಭು ಅವರು ಅಭಿನಂದಿಸಿದರು‌.


ಕೊಡಿಯಾಲಬೈಲ್ ಜಾರಪ್ಪ ಸಂಸ್ಮರಣೆ: 

ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಹಿರಿಯ ಅರ್ಥಧಾರಿಗಳಾಗಿ  ಪರಿಸರದ ಹಲವು ಸಂಘಗಳಲ್ಲಿ  ಸುಮಾರು ಐದು ದಶಕಗಳ ಕಾಲ ಅರ್ಥಧಾರಿಯಾಗಿ ಖ್ಯಾತಿ ಪಡೆದಿದ್ದ ಕೀರ್ತಿಶೇಷ ಕೊಡಿಯಾಲಬೈಲ್ ಜಾರಪ್ಪ  ಅವರ ಸಂಸ್ಮರಣೆ ಮಾಡಲಾಯಿತು. ಸರಳ ಭಾಷಾ ಪ್ರಯೋಗ ,ಅಚ್ಚುಕಟ್ಟಾದ ಪದ್ಯದ ಅರ್ಥ ಹೇಳುತಿದ್ದ ಜಾರಪ್ಪ ಅವರ ಸುಪುತ್ರ ಮೈಮ್ ರಮೇಶ್ ಅವರು ರಂಗಭೂಮಿಯ ಸಾಧಕರಾಗಿದ್ದಾರೆ.


ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಭಾಗಿತ್ವದಲ್ಲಿ 50 ಭಾನುವಾರ ನಿರಂತರ "ಸಂಮಾನ, ಸಂಸ್ಮರಣೆ, ತಾಳಮದ್ದಳೆ "ಯು ಮಹಾಮಾಯಾ ದೇವಸ್ಥಾನದ ಅಂಗಣದಲ್ಲಿ ನಡೆಯುತ್ತಿದೆ.


ನಮ್ಮೂರ ಆಟ ಕೂಟ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಮುಲ್ಕಿ ಕರುಣಾಕರ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಹಾಮಾಯಾ ಭಜನಾ ಮಂಡಳಿಯ ಬಾಬುರಾಯ ಪ್ರಭು, ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಉಪಾಧ್ಯಕ್ಷೆ ಪ್ರಪುಲ್ಲಾ ನಾಯಕ್, ಸುರಭಿ ಸಂಸ್ಥೆಯ ಶಿವಪ್ರಸಾದ್ ಪ್ರಭು, ಯಕ್ಷಗುರು ಅಶೋಕ ಬೋಳೂರು, ಮಧುಸೂದನ ಅಲೆವೂರಾಯ ಉಪಸ್ಥಿತರಿದ್ದರು.  


ಪ್ರಧಾನ ಸಂಚಾಲಕ ಯಕ್ಷಗಾನ ಅಕಾಡಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.

ಸಂಘದ ಕಲಾವಿದರಿಂದ ಶ್ರೀರಾಮ ಚರಿತಾಮೃತ ಸರಣಿಯ "ಪಾದುಕಾ ಪ್ರದಾನ" ತಾಳಮದ್ದಳೆ ನಡೆಯಿತು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم