ಮಧ್ಯಪ್ರದೇಶ : ತನ್ನ ತಂದೆ ಮೊಬೈಲಿಗೆ ಡೇಟಾ ಪ್ಯಾಕ್ ರಿಚಾರ್ಜ್ ಮಾಡಿಸಿಲ್ಲವೆಂಬ ಸಣ್ಣ ವಿಚಾರಕ್ಕೆ 14 ವರ್ಷದ ಬಾಲಕ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.
ಬಾಲಕನ ತಂದೆ ದಿನಗೂಲಿ ಕಾರ್ಮಿಕರಾಗಿದ್ದು, ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಈ ಹಿನ್ನಲೆ ಕಳೆದ ಕೆಲವು ದಿನಗಳಿಂದ ಮಗನ ಮೊಬೈಲ್ ಫೋನಿಗೆ ಡೇಟಾ ಪ್ಯಾಕ್ ರಿಚಾರ್ಜ್ ಮಾಡಿಸಿರಲಿಲ್ಲವೆನ್ನಲಾಗಿದೆ. ಇದರಿಂದ ಬೇಸರಗೊಂಡ ಬಾಲಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ಅಲ್ಲದೇ ಬಾಲಕ ಮೊಬೈಲ್ ಗೇಮ್ಸ್ ಗೆ ದಾಸನಾಗಿದ್ದು, ಕಳೆದ ಕೆಲವು ದಿನಗಳಿಂದ ಈ ಗೇಮ್ ಆಡದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಎನ್ನಲಾಗಿದೆ.
ಈ ಎಲ್ಲಾ ಕಾರಣಗಳಿಂದ ಬಾಲಕ ಆತ್ಮಹತ್ಯೆಗೆ ಶರಣಾಗಿರುವುದಾಗಿ ಜಬಲ್ಪುರ ಜಿಲ್ಲಾ ರಕ್ಷಣಾಧಿಕಾರಿ ಅಲೋಕ್ ಶರ್ಮಾ ಮಾಹಿತಿ ನೀಡಿದ್ದಾರೆ.
Post a Comment