ಕುಂಬಳೆ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಮಕ್ಕಳಿಂದ ವಿದ್ಯಾಲಯದ ಈ ಶೈಕ್ಷಣಿಕ ವರ್ಷದ ಕೊನೆಯ ದಿನವಾದ ಇಂದು (ಏ.2) ಶನಿವಾರ 'ಪ್ರತಿಭಾ ಭಾರತೀ' ಕಾರ್ಯಕ್ರಮ ನೆರವೇರಿತು.
ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಎಲ್‌ಕೆಜಿಯಿಂದ ತೊಡಗಿ ಎಸ್ಸೆಸ್ಸೆಲ್ಸಿ ತರಗತಿ ತನಕದ ಎಲ್ಲಾ ಮಕ್ಕಳೂ ಭಾಗವಹಿಸುವ ಈ ವೇದಿಕೆಯಲ್ಲಿ ಪುಟ್ಟ ನಾಟಕ, ಜಾನಪದ ನೃತ್ಯ, ಭರತನಾಟ್ಯ, ಸಮೂಹಗಾನ, ಭಾಷಣ, ನಾಡಗೀತೆ, ರೂಪಕ, ಚಿಣ್ಣರ ನೃತ್ಯ, ಮೊದಲಾದ ಎಲ್ಲಾ ಚಟುವಟಿಕೆಗಳನ್ನು ಚೆನ್ನಾಗಿ ಪ್ರದರ್ಶಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಾಲಾ ಗ್ರಂಥಪಾಲಿಕೆ ವಿಜಯಾಸುಬ್ರಹ್ಮಣ್ಯ, ಕುಂಬಳೆ ಭಾಗವಹಿಸಿ ಮಾತನಾಡುತ್ತಾ; "ಪ್ರತಿಭಾವಂತ ಮಕ್ಕಳೇ ಶಾಲೆಯ ಪ್ರಜ್ವಲಿಸುವ ದೀಪಗಳು!. ಕೊರೊನಾದಿಂದಾಗಿ ಕಾರ್ಯಕ್ರಮಗಳು ಸ್ಥಗಿತವಾಗಿತ್ತು. ಈ ಹಿಂದೆ ಚೆನ್ನಾಗಿ ನಡೆಯುತ್ತಿತ್ತು. ಮಕ್ಕಳು ಬಹಳ ಚುರುಕಾಗಿ ಭಾಗವಹಿಸುತ್ತಿದ್ದರು" ಎಂದರು.
ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್.ಎನ್ ರಾವ್ ಮುನ್ನಿಪ್ಪಾಡಿ ಹಾಗೂ ಉಪಾಧ್ಯಕ್ಷ ಶ್ಯಾಮರಾಜ್ ದೊಡ್ಡಮಾಣಿ ಮಕ್ಕಳಿಗೆ ಶುಭಕೋರಿದರು.
ಕೊರೋನಾ ಮಾರಿ ಬರುವ ಮೊದಲು ಶಾಲಾದಿನಗಳ ಪ್ರತಿ ತಿಂಗಳೂ ಈ ಕಾರ್ಯಕ್ರಮವು ನಡೆಯುತ್ತಿದ್ದು; ಎರಡು ವರ್ಷಗಳ ಕಾಲ ಇದು ಸ್ಥಗಿತವಾಗಿದ್ದು ಇಂದು ಕಾರ್ಯರೂಪಕ್ಕೆ ಬಂದುದಾಗಿದೆ ಎಂದು ಅದರ ರೂಪ ರೇಶೆಯನ್ನು ಶಾಲಾ ಆಡಳಿತಾಧಿಕಾರಿಗಳಾದ ಶ್ಯಾಂಭಟ್ ದರ್ಭೆಮಾರ್ಗ ತಿಳಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಿತ್ರಾಸರಸ್ವತಿ ಪೆರಡಾನ, ಎಸ್.ಎಸ್.ಎಲ್.ಸಿ ಮಕ್ಕಳ ಪಬ್ಲಿಕ್ ಪರೀಕ್ಷೆಗೆ ಸಹಿತ ಶುಭಕೋರಿ ಮಾತನಾಡಿದರು.
ಸಭಾಧ್ಯಕ್ಷನಾಗಿ ಹತ್ತನೇ ತರಗತಿ ವಿದ್ಯಾರ್ಥಿ ಷಣ್ಮುಖ ಮಾತನಾಡಿದನು. ಹತ್ತನೆ ತರಗತಿ ಮಕ್ಕಳು ಪ್ರಾರ್ಥನೆ ಹಾಡಿದರು. ಕಾರ್ಯಕ್ರಮ ನಿರೂಪಣೆ ಹತ್ತನೆ ತರಗತಿ ಕು|ಗ್ರೀಷ್ಮಾ ಮಾಡಿದರೆ, ಹತ್ತನೆ ತರಗತಿ ಮನೀಷ ಕುಮಾರ ಧನ್ಯವಾದವಿತ್ತರು.
ವರದಿ: ವಿಜಯಾಸುಬ್ರಹ್ಮಣ್ಯ ಕುಂಬಳೆ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق