ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜಾಂಬ್ರಿ ಗುಹೆ ಪರಿಸರದಲ್ಲಿ ಸ್ವಚ್ಛತೆಗಾಗಿ ಊರವರಿಂದಲೇ ಸೂಚನಾ ಫಲಕಗಳ ಅಳವಡಿಕೆ

ಜಾಂಬ್ರಿ ಗುಹೆ ಪರಿಸರದಲ್ಲಿ ಸ್ವಚ್ಛತೆಗಾಗಿ ಊರವರಿಂದಲೇ ಸೂಚನಾ ಫಲಕಗಳ ಅಳವಡಿಕೆ



ಆರ್ಲಪದವು: ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಮೂಲಸ್ಥಾನ ಜಾಂಬ್ರಿ ಗುಹೆಯ ಪರಿಸರದಲ್ಲಿ ಪಾವಿತ್ರ್ಯ ಮತ್ತು ಸ್ವಚ್ಛತೆಯನ್ನು ಕಾಪಾಡುವಂತೆ ಸೂಚಿಸಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.


ಕಳೆದ ವರ್ಷ ಆಗಸ್ಟ್‌ 1ರಂದು ಪಾಣಾಜೆ ಗ್ರಾಮ ಪಂಚಾಯತು ನೇತತ್ವದಲ್ಲಿ ಕರ್ನಾಟಕ- ಕೇರಳ ಎರಡೂ ರಾಜ್ಯಗಳ ಸಂಘ ಸಂಸ್ಥೆಗಳ ಮತ್ತು ಪರಿಸರ ಪ್ರೇಮಿಗಳ ಸಹಯೋಗದಲ್ಲಿ, ಅತ್ಯದ್ಭುತ ರೀತಿಯಲ್ಲಿ ಸ್ವಚ್ಚತಾ ಅಭಿಯಾನವನ್ನು ಜರುಗಿಸಿ, ಇಡೀ ಪರಿಸರವನ್ನು ಸ್ವಚ್ಛಗೊಳಿಸಿ, ಪಾಣಾಜೆ ಗ್ರಾಮ ಪಂಚಾಯತ್ ವತಿಯಿಂದ 3 ಕಸದ ತೊಟ್ಟಿಗಳನ್ನು ಇರಿಸಿ ಪರಿಸರದ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಹೆಚ್ಚಿನ ಪ್ರವಾಸಿಗರು (ಕೆಲವರನ್ನು ಹೊರತುಪಡಿಸಿ) ಈ ಕಸದ ತೊಟ್ಟಿಗಳನ್ನು ಬಳಸಿಕೊಂಡು ಈ ಸುಂದರ ಪವಿತ್ರ ತಾಣದ ಸ್ವಚ್ಚತೆಯನ್ನು ಕಾಪಾಡುತ್ತಾ ಬಂದಿದ್ದಾರೆ.


ಅಂದು ನಿಶ್ಚಯಿಸಿದಂತೆ ಜಾಂಬ್ರಿ ಗುಹಾ ಪರಿಸರದ 5 ಕಡೆಗಳಲ್ಲಿ 5 ಎಚ್ಚರಿಕೆಯ ಫಲಕಗಳನ್ನು ಇದೀಗ ಅಳವಡಿಸಲಾಗಿದೆ. ಊರ ನಾಗರಿಕರು, ಪರಿಸರ ಪ್ರೇಮಿಗಳು ಈ ಸೂಚನಾ ಫಲಕಗಳನ್ನು ಪ್ರಾಯೋಜಿಸಿದ್ದಾರೆ.

1) ನಮ್ಮ ರಸ್ತೆ ನಮ್ಮ ಹಕ್ಕು ಸಮಿತಿ, ಆರ್ಲಪದವು

2) ನಾರಾಯಣ ಪ್ರಕಾಶ್, ನಿರ್ದೇಶಕರು, ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು.

3) ಕೇಶವ ಮುರಳಿ, ಗಿಳಿಯಾಲು.

4) ಗಿಳಿಯಾಲು ಜತ್ತಪ್ಪ ರೈ ಮತ್ತು ಮನೆಯವರು 

5) ಗಿಳಿಯಾಲು ಮಹಾಬಲೇಶ್ವರ ಭಟ್ ಮತ್ತು ಮನೆಯವರು.

ಫಲಕಗಳನ್ನು ಪ್ರಾಯೋಜಿಸಿದ ಎಲ್ಲರಿಗೂ ಜಾಂಬ್ರಿ ಗುಹಾ ಪರಿಸರ ಸ್ವಚ್ಛತಾ ಸಮಿತಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದೆ.


ಇರುವುದೊಂದೇ ಜಾಂಬ್ರಿ, ಸ್ವಚ್ಛ ಪವಿತ್ರ ಜಾಂಬ್ರಿ ನಮ್ಮ ಹೆಮ್ಮೆ, ಸ್ವಚ್ಚತೆಯನ್ನು ಕಾಪಾಡೋಣ ಪರಿಸರವನ್ನು ರಕ್ಷಿಸೋಣ.

-ಗಿಳಿಯಾಲು ಮಹಾಬಲೇಶ್ವರ ಭಟ್ (ತಾತ, ಗಿಳಿಯಾಲು)

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم