ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ, ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಟೂರಿಸಂ, ಪಾಂಡೇಶ್ವರ, ಮಂಗಳೂರು ಇದರ 30 ನೇ ವರ್ಷದ ವಾರ್ಷಿಕ ಆಹಾರೋತ್ಸವ HOG-2K22 ನ್ನು ಏಪ್ರಿಲ್ 30 ರಂದು ಸಂಜೆ 6 ಗಂಟೆಗೆ ಆಯೋಜಿಸಲಾಗಿದೆ. ಇನ್ಸ್ಟಿಟ್ಯೂಟ್ ಕ್ಯಾಲೆಂಡರ್ ನಲ್ಲಿ ಆಹಾರ ಉತ್ಸವ "HOG" ವಾರ್ಷಿಕ ಕಾರ್ಯಕ್ರಮವಾಗಿದೆ.
ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗಾಗಿ 1992 ರಲ್ಲಿ ಆಹಾರ ಉತ್ಸವವನ್ನು ಪ್ರಾರಂಭಿಸಲಾಯಿತು. ಇದು ಸಂಸ್ಥೆಯ ಚಟುವಟಿಕೆಗಳೊಂದಿಗೆ ಸಮಾಜವನ್ನು ಸಂಯೋಜಿಸುವ ಪ್ರಯತ್ನವಾಗಿದೆ. ವಿದ್ಯಾರ್ಥಿಗಳು ವ್ಯವಹಾರ ಮಾದರಿಯನ್ನು ರಚಿಸುವ ಮತ್ತು ಕಾರ್ಯಗತಗೊಳಿಸುವ ನಿರೀಕ್ಷೆಯಿದೆ. ಈವೆಂಟ್‌ನ ಕಾರ್ಯನಿರ್ವಹಣೆ, ಹಣಕಾಸು ಮತ್ತು ಮಾರುಕಟ್ಟೆ ಚಟುವಟಿಕೆಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸುತ್ತಾರೆ.
ಈ ವರ್ಷ, ಆಹಾರೋತ್ಸವ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ.
1. ಲೈವ್ ಫುಡ್ ಕೌಂಟರ್ಗಳು
2. ತರಕಾರಿ ಮತ್ತು ಹಣ್ಣು ಕೆತ್ತನೆ
3. ಮಾಕ್ಟೇಲ್ ಕೌಂಟರ್
4. ಮನೋರಂಜನಾ ಕಾರ್ಯಕ್ರಮ
ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ, ಎ. ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಸಿಎ. ಎ. ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸುವರು.
ಮಂಗಳೂರಿನ ತಾಜ್ ಗೇಟ್ವೇ ಹೋಟೆಲ್ ಜನರಲ್ ಮ್ಯಾನೇಜರ್ ಪೀಟರ್ ನಿರ್ಮಲ್ ಮುಖ್ಯ ಅತಿಥಿ ಮತ್ತು ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಗೌರವಾನ್ವಿತ ಸಹ ಕುಲಾಧಿಪತಿ, ಎ. ಶಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷರಾದ ಡಾ.ಎ. ಶ್ರೀನಿವಾಸ್ ರಾವ್, ಶ್ರೀನಿವಾಸ ವಿವಿಯ ವಿಶ್ವಸ್ತ ಮಂಡಳಿ ಸದಸ್ಯರಾದ ಶ್ರೀಮತಿ ಎ. ವಿಜಯಲಕ್ಷ್ಮೀ ಆರ್. ರಾವ್, ಪ್ರೊ. ಎ. ಮಿತ್ರ ಎಸ್. ರಾವ್, ಉಪಕುಲಪತಿಗಳಾದ ಡಾ. ಪಿ. ಎಸ್. ಐತಾಳ್, ಸಹ ಉಪಕುಲಪತಿಗಳಾದ ಡಾ. ಜೆ. ಸತ್ಯ ಸಾಯಿ ಕುಮಾರ್, ಶ್ರೀನಿವಾಸ ವಿವಿ ಕುಲಸಚಿವರಾದ ಡಾ. ಅನಿಲ್ ಕುಮಾರ್, ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ. ಶ್ರೀನಿವಾಸ ಮಯ್ಯ, ಅಭಿವೃದ್ಧಿ ವಿಭಾಗದ ಕುಲಸಚಿವರಾದ ಡಾ. ಅಜಯ್ ಕುಮಾರ್, ಶೈಕ್ಷಣಿಕ ವಿಭಾಗದ ಕುಲಸಚಿವರಾದ ಶ್ರೀ ಆದಿತ್ಯಕುಮಾರ್ ಮಯ್ಯ, ಶ್ರೀನಿವಾಸ ವಿಶ್ವವಿದ್ಯಾಲಯದ ವಿವಿಧ ಕಾಲೇಜಿನ ಮುಖ್ಯಸ್ಥರು, ಪ್ರಾಂಶುಪಾಲರು, ಉಪನ್ಯಾಸಕರು ಉಪಸ್ಥಿತರಿರುವರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment