ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೇಮಾವತಿ ವೀ ಹೆಗ್ಗಡೆಯವರಿಗೆ ಡಾಕ್ಟರೇಟ್: 'ಸಿರಿ' ಗ್ರಾಮೋದ್ಯೋಗ ವತಿಯಿಂದ ಅಭಿನಂದನೆ

ಹೇಮಾವತಿ ವೀ ಹೆಗ್ಗಡೆಯವರಿಗೆ ಡಾಕ್ಟರೇಟ್: 'ಸಿರಿ' ಗ್ರಾಮೋದ್ಯೋಗ ವತಿಯಿಂದ ಅಭಿನಂದನೆ


ಉಜಿರೆ: ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಹುಟ್ಟಿಗೆ ಮೂಲ ಕಾರಣೀಭೂತರಾದ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ಡಾ|| ಹೇಮಾವತಿ ವಿ ಹೆಗ್ಗಡೆಯವರಿಗೆ ಸಮಾಜ ಸೇವೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ನೀಡಲ್ಪಟ್ಟ ಗೌರವ “ಡಾಕ್ಟರೇಟ್” ಪದವಿಯ ಸಂದರ್ಭದಲ್ಲಿ ಸಿರಿ ಸಿಬ್ಬಂದಿಗಳಿಂದ ಅಭಿನಂದನಾ ಕಾರ್ಯಕ್ರಮವನ್ನು ಏ.28ರಂದು ಸಿರಿ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ಹಮ್ಮಿಕೊಳ್ಳಲಾಯಿತು.


ಈ ಸಂದರ್ಭ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್ ಜನಾರ್ಧನ್‍ರವರು ಸಿರಿ ಸಂಸ್ಥೆಯು ಅಮ್ಮನವರ ಮಾರ್ಗದರ್ಶನದಲ್ಲಿ ನಡೆದು ಬಂದ ಹಾದಿಯ ಬಗ್ಗೆ ವಿವರವಾಗಿ ಮಾತನಾಡಿದರು. 

ಸಿರಿ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಗಳ ವತಿಯಿಂದ ಮಾತೃಶ್ರೀ ಡಾ|| ಹೇಮಾವತಿ ವಿ ಹೆಗ್ಗಡೆಯವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಸಿರಿ ಸಂಸ್ಥೆಯಲ್ಲಿ 15 ವರ್ಷಗಳಿಂದ ಮೇಲ್ಪಟ್ಟು ಸೇವೆ ಸಲ್ಲಿಸಿದ ಶ್ರೀ ವಲೇರಿಯನ್ ವೇಗಸ್, ವಿನ್ಸೆಂಟ್ ಲೋಬೋ, ಕುಸುಮ, ಮಂಜುಳಾ ಎನ್, ಪದ್ಮಾವತಿ, ಗಣೇಶ್, ಜೀವನ್ ಕುಮಾರ್, ಚಂದ್ರಶೇಖರ್, ಇಂದಿರಾ, ವಿಶ್ವನಾಥ ಶೆಟ್ಟಿ, ಪ್ರಸನ್ನ, ಸಂತೋಷ್, ರೇಖಾ ಆಚಾರ್ಯ, ಯಶೋಧರ ಬಿ, ಆನಂದ ಗೌಡ, ಪ್ರವೀಣ್ ಕುಮಾರ್, ವಸಂತಿ, ಜಗದೀಶ್ ಶೆಟ್ಟಿ, ಹರೀಶ್ ಎಸ್, ಗೀತಾ, ದಯಾನಂದ, ಉಷಾ, ಪುಷ್ಪಲತಾ, ಸಂಧ್ಯಾ, ಅನಿತಾ, ಸಾವಿತ್ರಿ, ಭವಾನಿ ಶಂಕರಿ, ಸುಬ್ರಹ್ಮಣ್ಯ ಹಾಗೂ ಆಶಾಲತಾರವರನ್ನು ನೆನಪಿನ ಕಾಣಿಕೆ ನೀಡಿ ಮಾತೃಶ್ರೀ ಡಾ|| ಹೇಮಾವತಿ ವಿ ಹೆಗ್ಗಡೆಯವರು ಅಭಿನಂದಿಸಿದರು.


ಮಾತೃಶ್ರೀ ಡಾ|| ಹೇಮಾವತಿ ವಿ ಹೆಗ್ಗಡೆಯವರು ಸಿರಿ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಸಂಸ್ಥೆಯ ಬೆಳವಣಿಗೆಗೆ ಪ್ರತಿಯೊಬ್ಬ ಕಾರ್ಯಕರ್ತನೂ ತನ್ನ ಸಂಸ್ಥೆ ಎಂದು ತಿಳಿದು ನಿಷ್ಠೆಯಿಂದ ಕೆಲಸ ಮಾಡಿದಲ್ಲಿ ಸಂಸ್ಥೆಯು ಅಭಿವೃದ್ಧಿಯಾಗುವುದರ ಜೊತೆಗೆ ಇನ್ನೂ ನೂರಾರು ಮಂದಿಗೆ ಉದ್ಯೋಗಾವಕಾಶ ನೀಡಲು ಅನುಕೂಲವಾಗುವುದು. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಿ ಕೆಲಸ ಮಾಡುವಂತೆ ಮಾರ್ಗದರ್ಶನ ನೀಡಿದರು.


ಈ ಸಮಾರಂಭದಲ್ಲಿ ಸಿರಿ ಸಂಸ್ಥೆಯ ಅಧಿಕಾರಿ ವರ್ಗ ಮತ್ತು ಸಿಬ್ಬಂದಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಅಧಿಕಾರಿ ವರ್ಗ ಮತ್ತು ಸಿಬ್ಬಂದಿಗಳು ಹಾಗೂ ಸಿರಿ ಸಂಸ್ಥೆಯ ಹಿತೈಷಿಗಳು ಉಪಸ್ಥಿತರಿದ್ದರು.


ಸಿರಿ ಸಂಸ್ಥೆಯ ಆಡಳಿತ ಮತ್ತು ಲೆಕ್ಕಪತ್ರ ವಿಭಾಗದ ನಿರ್ದೇಶಕರಾದ ಪ್ರಸನ್ನರವರು ಸ್ವಾಗತಿಸಿದರು.  ಸಹಾಯಕ ಪ್ರಬಂಧಕಿ ಶ್ರೀಮತಿ ವಸಂತಿಯವರು ವಂದಿಸಿದರು. ಶ್ರೀ ಜೀವನ್ ಕುಮಾರ್ ಶೆಟ್ಟಿಯವರು ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 Comments

Post a Comment

Post a Comment (0)

Previous Post Next Post