ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿಟ್ಟೆ ಮಾನವಿಕ ವಿಭಾಗದಿಂದ ಆಶಾ ಕಾರ್ಯಕರ್ತೆಯರಿಗೆ ಕಾರ್ಯಾಗಾರ

ನಿಟ್ಟೆ ಮಾನವಿಕ ವಿಭಾಗದಿಂದ ಆಶಾ ಕಾರ್ಯಕರ್ತೆಯರಿಗೆ ಕಾರ್ಯಾಗಾರ


ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾನವಿಕ ವಿಭಾಗದ ವತಿಯಿಂದ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರಿಗೆ ಒಂದು ದಿನದ ಕಾರ್ಯಾಗಾರವನ್ನು ಏ.28 ರಂದು ಹಮ್ಮಿಕೊಳ್ಳಲಾಯಿತು. ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಹರೀಶ್ ಆಚಾರ್ಯ ಹಾಗೂ ಎನ್.ಸಿ.ಡಿ ವೈದ್ಯಾಧಿಕಾರಿ ಡಾ. ನಿಖಿಲ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ|ನಿರಂಜನ್ ಎನ್ ಚಿಪ್ಳೂಣ್ಕರ್ ಅಧ್ಯಕ್ಷತೆ ವಹಿಸಿದ್ದರು.


ಈ ಒಂದು ದಿನಗದ ಕಾರ್ಯಾಗಾರದಲ್ಲಿ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರಿಗೆ ಅವರ ದೈನಂದಿನ ಔದ್ಯೋಗಿಕ ಜವಾಬ್ದಾರಿಯನ್ನು ನಿಭಾಯಿಸಲು ಅನುಕೂಲವಾಗುವಂತಹ 3 ವಿಷಯಗಳ ಬಗೆಗೆ ಮಾಹಿತಿಯನ್ನು ನೀಡಲಾಯಿತು. ಮಾನವಿಕ ವಿಭಾಗದ ಸಹಪ್ರಾಧ್ಯಾಪಕ ಶ್ರೀ ಶ್ರೀನಿವಾಸ ನೆಕ್ಕರ್ ಅವರು ‘ಬೇಸಿಕ್ ಕಮ್ಯೂನಿಕೇಟಿವ್ ಇಂಗ್ಲೀಷ್’ ಎಂಬ ವಿಷಯದ ಬಗೆಗೆ ಮಾತನಾಡಿದರೆ, ಶ್ರೀಮತಿ ಸೋನಿಯಾ ಲೋಬೋ ಅವರು ‘ಬೇಸಿಕ್ ಮೆಡಿಕಲ್ ಟರ್ಮಿನಾಲಜೀಸ್’ ಬಗೆಗೆ ವಿವರಿಸಿದರು. ಸಹಪ್ರಾಧ್ಯಾಪಕಿ ಶ್ರೀಮತಿ ಶ್ವೇತಾ ಭರತ್ ಅವರು ‘ಟೆಲಿಫೋನ್ ಎಟಿಕೆಟ್’ ಎಂಬ ವಿಷಯವನ್ನು ವಿವರಿಸಿದರು.


‘ಇಂತಹ ಕಾರ್ಯಾಗಾರಗಳು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ’ ಎಂದು ಮಾನವಿಕ ವಿಭಾಗದ ಮುಖ್ಯಸ್ಥೆ ರಶ್ಮೀ ಹೆಗ್ಡೆ ಅವರು ತಿಳಿಸಿದರು.


ಸಹಪ್ರಾಧ್ಯಾಪಕ ಶ್ರೀನಿವಾಸ ನೆಕ್ಕರ್ ಸ್ವಾಗತಿಸಿದರು. ಸಹಪ್ರಾಧ್ಯಾಪಕಿ ಸೋನಿಯಾ ವಂದಿಸಿದರು. ಸಹಪ್ರಾಧ್ಯಾಪಕಿ ಶ್ವೇತಾ ಭರತ್ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post