ಬೆಂಗಳೂರು: ಲೇಖಕ ಎನ್.ವ್ಹಿ. ರಮೇಶ್ ಅವರ 17 ಪುಸ್ತಕಗಳ ಲೋಕಾರ್ಪಣೆ ಹಾಗೂ ಕವಿಗೋಷ್ಠಿಯು ಮೇ 1, ಭಾನುವಾರ ಬೆಳಿಗ್ಗೆ 10.30ಕ್ಕೆ ಮೈಸೂರಿನ ಜಯನಗರ, ಹೊಸ ಕೋರ್ಟಿನ ಎದುರಿನ ನೇಗಿಲಯೋಗಿ ಸಭಾಂಗಣದಲ್ಲಿ ಅಭಿರುಚಿ ಬಳಗ ಹಾಗೂ ಆಸಕ್ತಿ ಪ್ರಕಾಶನ ಆಯೋಜಿಸಿದೆ.
ಬೆಂಗಳೂರು ಆಕಾಶವಾಣಿ ಹಿರಿಯ ಉದ್ಘೋಷಕಿ ಬಿ.ಕೆ.ಸುಮತಿ ಕಾರ್ಯಕ್ರಮ ಉದ್ಘಾಟಿಸುವರು, ಕನ್ನಡ ಪ್ರಭ ಪತ್ರಿಕೆ ಸ್ಥಳೀಯ ಸಂಪಾದಕ ಅಂಶಿ ಪ್ರಸನ್ನಕುಮಾರ್ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸುವರು.
ಮುಖ್ಯ ಅತಿಥಿಗಳಾಗಿ ಶ್ರೀ ನಿ. ಗಿರಿಗೌಡ ಸದಸ್ಯರು, ಕರ್ನಾಟಕ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿ, ಶ್ರೀ ಡಿ.ಎನ್. ಲೋಕಪ್ಪ ಸದಸ್ಯರು, ಕರ್ನಾಟಕ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿ., ಶ್ರೀ ಎನ್.ಸತ್ಯನಾರಾಯಣ ನಿವೃತ್ತ ಪೊಲೀಸ್ ಅಧಿಕಾರಿ, ಮೈಸೂರು., ಶ್ರೀಮತಿ ಎ.ಹೇಮಗಂಗಾ ರಾಜ್ಯಾಧ್ಯಕ್ಷರು, ಸಿರಿಗನ್ನಡ ವೇದಿಕೆ ಹಾಗೂ ಸಂಸ್ಕೃತಿ ಪೋಷಕರು. ಭಾಗವಹಿಸುವರು.
ಶ್ರೀಮತಿ ಹರಿಪ್ರಸಾದ್ ರೇಡಿಯೋ-ರಂಗಭೂಮಿಯ ಕಲಾವಿದರು, ಸಾಹಿತಿಗಳು, ನಿವೃತ್ತ ವಿಜ್ಞಾನಿ ಸಿ.ಎಫ್.ಟಿ.ಆರ್.ಐ ಹಾಗೂ ಪ್ರಧಾನ ಸಂಪಾದಕರು, ಬಾಲ ವಿಜ್ಞಾನ. ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment