ಬೆಂಗಳೂರು : ಎಐಸಿಸಿ ನಿಕಟಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪವರ್ ಸ್ಟಾರ್ ದಿವಂಗತ ಪುನೀತ್ ರಾಜಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಗುರುವಾರ ರಾತ್ರಿ ಭೇಟಿ ನೀಡಿ ಪತ್ನಿ ಅಶ್ವಿನಿ , ಪುತ್ರಿ ವಂದಿತಾ ಅವರಿಗೆ ಸಾಂತ್ವನ ಹೇಳಿದರು.
ಕನ್ನಡದ ಖ್ಯಾತ ನಟರಾಗಿದ್ದ ಶ್ರೀ ಪುನೀತ್ ರಾಜ್ ಕುಮಾರ್ ಅವರ ನಿವಾಸದಲ್ಲಿ ಇಂದು ಅವರ ಪತ್ನಿ ಮತ್ತು ಕುಟುಂಬವನ್ನು ಭೇಟಿ ಮಾಡಿ ಪುನೀತ್ ಅವರ ಅಗಲಿಕೆಗೆ ನನ್ನ ಸಂತಾಪಗಳನ್ನು ಸೂಚಿಸಿದೆ.
ಅತ್ಯಂತ ಕಡಿಮೆ ವಯಸ್ಸಿನಲ್ಲೇ ಪುನೀತ್ ಅವರು ಕೋಟ್ಯಾಂತರ ಕನ್ನಡಿಗರ ಮನೆ ಮನಗಳಿಗೆ ಎಂದೂ ಮರೆಯಲಾಗದಂತಹ ನೆನಪಿನ ಬುತ್ತಿಯನ್ನ ನೀಡಿದ್ದಾರೆ.
ಅಪ್ಪು ಮನೆ ಭೇಟಿ ನೀಡಿ ಸಾಂತ್ವಾನ ಹೇಳಿದ ಬಳಿಕ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ "ಕನ್ನಡದ ಖ್ಯಾತ ನಟರಾಗಿದ್ದ ಶ್ರೀ ಪುನೀತ್ ರಾಜಕುಮಾರ್ ಅವರ ನಿವಾಸದಲ್ಲಿ ಇಂದು ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಕುಟುಂಬವನ್ನು ಭೇಟಿ ಮಾಡಿ ಪುನೀತ್ ಅವರ ಅಗಲಿಕೆಗೆ ನನ್ನ ಸಂತಾಪಗಳನ್ನು ಸೂಚಿಸಿದೆ. ಅತ್ಯಂತ ಕಡಿಮೆ ವಯಸ್ಸಿನಲ್ಲೇ ಪುನೀತ್ ಅವರು ಕೋಟ್ಯಾಂತರ ಕನ್ನಡಿಗರ ಮನೆ ಮನಗಳಿಗೆ ಎಂದೂ ಮರೆಯಲಾಗದಂತಹ ನೆನಪಿನ ಬುತ್ತಿಯನ್ನ ನೀಡಿದ್ದಾರೆ" ಎಂದು ರಾಹುಲ್ ಗಾಂಧಿ ಸ್ಮರಿಸಿದ್ದಾರೆ.
Post a Comment