ಮಂಗಳೂರು: ಇಂದು ಬೆಳಿಗ್ಗೆ ಮುಡಿಪು ಭಾಗದಿಂದ ಮಂಗಳೂರಿನ ಕುದ್ರೋಳಿಯ ಕಸಾಯಿಖಾನೆಗೆ ಆಲ್ಟೋ ಕಾರಿನಲ್ಲಿ ಸಾಗಾಟವಾಗುತ್ತಿದ್ದ ಸುಮಾರು 500 ಕೆ.ಜಿ ಗೋ ಮಾಂಸವನ್ನು ಬಜರಂಗದಳದ ಕಾರ್ಯಕರ್ತರು ಡೊಂಗರಿಕೆರೆ ಬಳಿ ತಡೆದು ನಿಲ್ಲಿಸಿ ಬಂದರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಗೋ ಹತ್ಯಾ ನಿಷೇದ ಕಾನೂನು ಬಂದ ನಂತರ ಕೂಡ ಈ ಅಕ್ರಮ ಗೋ ಸಾಗಾಟ, ಗೋ ಹತ್ಯೆ ಗಳು ನಿರಂತರವಾಗಿ ನಡೆಯುತ್ತಿದೆ ಎಂದು ಸಾರ್ವಜನಿಕರು ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ
Post a Comment