ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರೇಡಿಯೋ ಮಣಿಪಾಲ್‌ ನಲ್ಲಿ ಇಂದು ಸಂಜೆ 'ಗೋಬರ್ ಧನ್ ಯೋಜನೆ' ಕುರಿತು ಮಾತುಕತೆ

ರೇಡಿಯೋ ಮಣಿಪಾಲ್‌ ನಲ್ಲಿ ಇಂದು ಸಂಜೆ 'ಗೋಬರ್ ಧನ್ ಯೋಜನೆ' ಕುರಿತು ಮಾತುಕತೆ



ಉಡುಪಿ: ಮಣಿಪಾಲದ ಎಂಐಸಿ ಕ್ಯಾಂಪನ್‌ಲ್ಲಿರುವ ದೇಸಿ ಸೊಗಡಿನ ಸಮುದಾಯ ಬಾನುಲಿ ರೇಡಿಯೋ ಮಣಿಪಾಲ್ (90.4 Mhz) ನ “ಶುದ್ಧ ಜಲ, ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವಸಂಕುಲ”  ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಇಂದು ಸಂಜೆ (ಏ.7) 6 ಗಂಟೆಗೆ ಗೋಬರ್ ಧನ್ ಯೊಜನೆಯ ಅನುಕೂಲಗಳು ಕುರಿತು ಮಾತುಕತೆ ಪ್ರಸಾರವಾಗಲಿದೆ.


ಕರ್ನಾಟಕ ಸರಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಾಯೋಜನೆ ಹಾಗೂ ಉಡುಪಿ ಜಿ.ಪಂ ಸಹಯೋಗದ ಈ ಕಾರ್ಯಕ್ರಮದಲ್ಲಿ ರಾಜ್ಯ ಬಯೋಗ್ಯಾಸ್ ಅಸೋಸಿಯೇಶನ್ ನ ಅಧ್ಯಕ್ಷರಾದ ಸತ್ಯೇಂದ್ರ ಪೈ ಕಟಪಾಡಿ ಪಾಲ್ಗೊಳ್ಳಲಿದ್ದಾರೆ. ಎಪ್ರಿಲ್ 8ರಂದು ಮಧ್ಯಾಹ್ನ 1 ಗಂಟೆಗೆ ಇದರ ಮರುಪ್ರಸಾರವಿರುವುದು ಎಂದು ಪ್ರಕಟಣೆ ತಿಳಿಸಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم