ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿವೃತ್ತ ಶಿಕ್ಷಕಿ ಯಶೋದಾ ರಾವ್ ಅವರಿಗೆ ಕಲ್ಕೂರ ಸಾಧನಾ ಸಿರಿ ಪುರಸ್ಕಾರ

ನಿವೃತ್ತ ಶಿಕ್ಷಕಿ ಯಶೋದಾ ರಾವ್ ಅವರಿಗೆ ಕಲ್ಕೂರ ಸಾಧನಾ ಸಿರಿ ಪುರಸ್ಕಾರ



ಮಂಗಳೂರು: ಶುಭಕೃತ್ ಸಂವತ್ಸರದ ಯುಗಾದಿಯ ಶುಭ ಸಂದರ್ಭದಲ್ಲಿ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕಲ್ಕೂರ ಸಾಧನಾ ಸಿರಿ ಪ್ರಶಸ್ತಿಯನ್ನು ನಿವೃತ್ತ ಶಿಕ್ಷಕಿ ಶ್ರೀಮತಿ ಯಶೋದಾ ರಾವ್ ಅವರಿಗೆ ನೀಡಿ ಪುರಸ್ಕರಿಸಲಾಯಿತು.


ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರು ತಮ್ಮ ನಿವಾಸದಲ್ಲಿ ಇಂದು ಏರ್ಪಡಿಸಿದ್ದ ಸೌರಮಾನ ಯುಗಾದಿ- ವಿಷು ಹಬ್ಬ ಆಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಯಶೋದಾ ರಾವ್ ಅವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.


ಶ್ರೀಮತಿ ಯಶೋದಾ ರಾವ್ ಅವರು 1953ರ ಜುಲೈ 25ರಂದು ಪಣಂಬೂರು ಕೃಷ್ಣರಾವ್ ಮತ್ತು ಶಾರದಾ ದಂಪತಿಗಳ 9ನೇ ಪುತ್ರಿಯಾಗಿ ಜನಿಸಿದರು. ಇವರು ತಮ್ಮ ಬಾಲ್ಯದ ಜೀವನದಲ್ಲಿ ಬಡತನ ಹಾಗೂ ಬಹಳಷ್ಟು ಕಷ್ಟ ನೋವುಗಳನ್ನು ಸಹಿಸಿಕೊಂಡೇ ಮಂಗಳೂರಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದರು.


ಶಿಕ್ಷಣದ ಜತೆ ಜತೆಗೇ ನಾಟಕ ಮತ್ತು ನೃತ್ಯಗಳಲ್ಲಿನ ಆಸಕ್ತಿಯಿಂದಾಗಿ ಕೋಕಿಲ ಆರ್ಟ್ಸ್‌ನಲ್ಲಿ ಸೇರಿಕೊಂಡು ಪ್ರದರ್ಶನಗಳನ್ನು ನೀಡುತ್ತಿದ್ದರು.


ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಕುಂತೂರಿನ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ಮುಂದೆ ಉತ್ತಮ ಶಿಕ್ಷಕಿಯಾಗಿ ಹೆಸರು ಗಳಿಸಿದರು. ನಿವೃತ್ತಿಯ ನಂತರವೂ ಕೊಂಚಾಡಿಯ ರಾಮಾಶ್ರಮ ಶಾಲೆಯಲ್ಲಿ 5 ವರ್ಷ ಸೇವೆ ಸಲ್ಲಿಸಿದರು. ಅಲ್ಲದೆ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ 1 ವರ್ಷ ಸೇವೆ ಸಲ್ಲಿಸಿದರು.


ಪ್ರಸ್ತುತ ಲ್ಯಾಂಡ್‌ಲಿಂಕ್ಸ್‌ ಬಡಾವಣೆಯಲ್ಲಿ ವಾಸವಿದ್ದುಕೊಂಡು ಶಿವಳ್ಳಿ ಸ್ಪಂದನದ ಮಹಿಳಾ ಘಟಕಕ್ಕೆ ಮಂಗಳೂರು ತಾಲೂಕಿನ ಸದಸ್ಯೆಯಾಗಿದ್ದು, ಕುಣಿತ ಭಜನೆ, ಭಜನೆ ಸೇರಿದಂತೆ ಹಲವಾರು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم