ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೈಕ್ ಮತ್ತು ಕಾರು ಅಪಘಾತ; ಇಬ್ಬರು ಸಾವು

ಬೈಕ್ ಮತ್ತು ಕಾರು ಅಪಘಾತ; ಇಬ್ಬರು ಸಾವು

 


ಕಲಬುರಗಿ: ಬೈಕ್ ಮತ್ತು ಕಾರಿನ ಮಧ್ಯೆ ಅಪಘಾತ ಸಂಭವಿಸಿ ಮದುಮಗ ಮತ್ತು ಆತನ ಸ್ನೇಹಿತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯೊಂದು ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ ಬಳಿ ನಡೆದಿದೆ.

ಯಡ್ರಾಮಿ ತಾಲೂಕು ಕೋಣಶಿರಸಗಿ ಗ್ರಾಮದ ದೇವೇಂದ್ರಪ್ಪ (30) ಹಾಗೂ ವಸ್ತಾರಿ ಗ್ರಾಮದ ಗುರುರಾಜ್ (30) ಮೃತ ದುರ್ದೈವಿಗಳು. ಅಪಘಾತದಲ್ಲಿ ಕಾರಿನಲ್ಲಿದವರಿಗೆ ಗಾಯಾಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದುಮಗ ದೇವೇಂದ್ರಪ್ಪ ಮತ್ತು ಆತನ ಸ್ನೇಹಿತ ವಿವಾಹ ಆಮಂತ್ರಣ ಪತ್ರಿಕೆಯನ್ನು ಕೊಡಲು ಜೇರಟಗಿ ಕಡೆ ಹೊರಟ್ಟಿದ್ದರು.

ಈ ವೇಳೆ ವಿಜಯಪುರ ಮೂಲದ ಕಾರು ವೇಗವಾಗಿ ಮತ್ತೊಂದು ವಾಹನವನ್ನು ಓವರ್ ಟೇಕ್ ಮಾಡಲು ಯತ್ನಿಸಿದ ಪರಿಣಾಮ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಓರ್ವ ಯುವಕನ ದೇಹ ಛಿದ್ರಗೊಂಡಿದೆ.

ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತಕ್ಕೆ ಕಾರು ಚಾಲಕನ ನಿರ್ಲಕ್ಷ್ಯವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಈ ಬಗ್ಗೆ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಕುಟಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


hit counter

0 تعليقات

إرسال تعليق

Post a Comment (0)

أحدث أقدم