ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಎಸಿ ಸ್ಫೋಟ; ಒಂದೇ ಕುಟುಂಬದ ನಾಲ್ಕು ಮಂದಿ ಸಾವು

ಎಸಿ ಸ್ಫೋಟ; ಒಂದೇ ಕುಟುಂಬದ ನಾಲ್ಕು ಮಂದಿ ಸಾವು

 


ವಿಜಯನಗರ: ಎಸಿ ಸ್ಫೋಟಗೊಂಡು ಅಗ್ನಿ ಅವಘಡದಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆಯೊಂದು ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ.

ವೆಂಕಟ್ ಪ್ರಶಾಂತ್​ (42) ಪತ್ನಿ ಡಿ. ಚಂದ್ರಕಲಾ (38 ) ಹಾಗೂ ಮಕ್ಕಳಾದ ಎಚ್.ಎ. ಅರ್ದ್ವಿಕ್ (16) ಮತ್ತು ಪ್ರೇರಣಾ (8) ಮೃತ ದುರ್ದೈವಿಗಳು.

ರಾಘವೇಂದ್ರ ಶೆಟ್ಟಿ ಎಂಬವರ ಮನೆಯಲ್ಲಿ ಅವಘಡ ಸಂಭವಿಸಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್​ ಮತ್ತು ಎ.ಸಿ ಸ್ಫೋಟದಿಂದ ಮನೆಗೆ ಬೆಂಕಿ ಹತ್ತಿಕೊಂಡಿದೆ.

ಹೊಗೆ ಆವರಿಸಿದಾಗ ರಾಘವೇಂದ್ರ ಶೆಟ್ಟಿ ಮತ್ತು ಅವರ ಪತ್ನಿ ರಾಜಶ್ರೀ ಅವರು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.

ಆದರೆ, ವೆಂಕಟ್​ ಪ್ರಶಾಂತ್​ ಮತ್ತು ಅವರ ಪತ್ನಿ ಮತ್ತು ಮಕ್ಕಳು ಹೊರಬರಲಾಗದೇ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಬೆಳಗಿನ ಜಾವ ಅವಘಡ ನಡೆದಿದ್ದು, ಮೃತದೇಹಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಘಟನೆ ಬಗ್ಗೆ ಮರಿಯಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم