ಸೌಹಾರ್ದತೆ, ಸಮಾನತೆ ಮತ್ತು ಸಹೋದರತ್ವದ ಸಾಕಾರ ಮೂರ್ತಿ ಡಾ. ಬಿ.ಆರ್. ಅಂಬೇಡ್ಕರ್
ಮಂಗಳೂರು: ನಗರದ ಮೇರಿಹಿಲ್‍ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ, ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಇಂದು (ಗುರುವಾರ, ಏ.14) ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಅವರು, ತಮ್ಮ ಜೀವನದುದ್ದಕ್ಕೂ ವರ್ಗ ಅಸಮಾನತೆ, ಜಾತಿ ಅಸಮಾನತೆ ಮತ್ತು ಲಿಂಗ ಅಸಮಾನತೆಯನ್ನು ಹೊಡೆದೋಡಿಸಿದ ಡಾ: ಬಾಬಾ ಸಾಹೇಬ ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಸಿದ್ದಾಂತಗಳನ್ನು ಭಾರತೀಯರ ಮನೆ ಮನಗಳಲ್ಲಿ ಆಳವಾಗಿ ಬೇರೂರಿದೆ. ನಮ್ಮ ಸಂವಿಧಾನದ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ನಡೆದುಕೊಂಡು ಅವರ ಆಶಯದಂತೆ ದಲಿತ, ದಮನಿತ ಮತ್ತು ಶ್ರಮಜೀವಿ ಸಮುದಾಯದ ಜನರನ್ನು ಗುರುತಿಸಿ, ಗೌರವಿಸಿ ಸಮಾಜದ ಮುಖ್ಯವಾಹಿನಿಗೆ ಸೇರಿಸಿಕೊಂಡಾಗ ಮಾತ್ರ ಅಂಬೇಡ್ಕರ್ ಜಯಂತಿಯ ಆಚರಣೆಗೆ ಹೆಚ್ಚಿನ ಮೌಲ್ಯ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ವಿಲ್ಸನ್ ಲೋಬೋ ಹಾಗೂ ರುಬೀನಾ ಲೋಬೋ ಹಾಗೂ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಅನಿತಾ ಟಿ.ಎಸ್. ಗೃಹರಕ್ಷಕರಾದ ದಿವಾಕರ್, ದುಶ್ಯಂತ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق