ಮೂಡುಬಿದಿರೆ: ಅನ್ವೇಷಣೆಗಳು ವಿಭಿನ್ನವಾಗಿದ್ದಾಗ ಸಮಸ್ಯೆಗಳಿಗೆ ಮಾರ್ಗ ಹುಡುಕಲು ಸಾಧ್ಯ, ಪರಿಹಾರಗಳಿಲ್ಲದ ಸಮಸ್ಯೆಗಳಿಗೆ ತರ್ಕಬದ್ಧ ಆಲೋಚನೆಯಿಂದ ಪರಿಹಾರ ಕಂಡುಕೊಳ್ಳಬೇಕೆಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್‍ವಾನ್ಸ್ಡ್ ಸ್ಟಡೀಸ್ (ಎನ್‍ಐಎಎಸ್)ನ ಇಸ್ರೋ ಚೇರ್ ಪ್ರೊಫೆಸರ್ ಡಾ. ಪಿ ಜಿ. ದಿವಾಕರ್ ಹೇಳಿದರು.
ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಮಿಜಾರಿನ ಎಂಬಿಎ ಆಡಿಟೋರಿಯಂನಲ್ಲಿ `ಇನೋವೇಶನ್ ಇನ್ ಸ್ಪೇಸ್ ಟೆಕ್ನಾಲಜಿ ಆ್ಯಂಡ್ ಐಸಿಟಿ- ಪೊಟೆನ್ಶಿಯಲ್ ಫಾರ್ ಸ್ಟಾರ್ಟ್‍ಅಪ್ಸ್ ಆ್ಯಂಡ್ ಇನಕ್ಯೂಬೇಶನ್ಸ್’ ವಿಷಯದ ಕುರಿತು ನಡೆದ ಅತಿಥಿ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಕೃಷಿ, ನೀರು ಮತ್ತು ನೈಸರ್ಗಿಕ ಸಂಪನ್ಮೂಲಗಳಿಗೆ ಸ್ಪೇಸ್, ಗ್ರೌಂಡ್ ಹಾಗೂ ಡ್ರೋನ್ ತಂತ್ರಜ್ಞಾನಗಳನ್ನು ಬಳಸುವುದರಿಂದ ಜನರ ಜೀವನ ಶೈಲಿಯಲ್ಲಿ ಬದಲಾವಣೆ ತರಬಹುದು.
ಸ್ಟ್ಟಾರ್ಟ್‍ಅಪ್ ಆರಂಭಿಸುವಲ್ಲಿ ಭಾರತ ಪ್ರಪಂಚದಲ್ಲಿಯೇ ಮೂರನೇ ಸ್ಥಾನದಲ್ಲಿದ್ದು, ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ದರ್ಜೆಯ ಇನ್ಕ್ಯುಬೇಶನ್ ಕೇಂದ್ರಗಳ ಮೂಲಕ ಸರಿಯಾದ ತಾಂತ್ರಿಕ ತರಬೇತಿ ಮತ್ತು ಕಲಿಕಾ ಸಂಪನ್ಮೂಲಗಳನ್ನು ಒದಗಿಸಿದಾಗ ಹೆಚ್ಚಿನ ಸ್ಟಾರ್ಟ್‍ಅಪ್‍ಗಳು ಕಾರ್ಯಾರಂಭಿಸಲು ಸಾಧ್ಯ. ಸರಕಾರವೂ ಕೂಡ ಇ-ಗವರ್‍ನೆನ್ಸ್ ಹಾಗೂ ಗಂಗಾ ನದಿಯ ಹೂಳೆತ್ತುವಿಕೆಯಂತಹ ಯೋಜನೆಗಳಲ್ಲಿ ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಿರುವುದು ಉತ್ತಮ ನಡೆ. ವಿದ್ಯಾರ್ಥಿಗಳ ಯೋಚನೆ ವಿಭಿನ್ನವಾಗಿದ್ದಾಗ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರ ಹೊಂದುತ್ತದೆ. ಚಂದ್ರನನ್ನು ತಲುಪುವುದು ಅಸಾಧಾರಣ ಜತೆಗೆ ಅಲ್ಲಿನ ಧ್ರುವ ಪ್ರದೇಶದಲ್ಲಿ ನೀರಿನ ಇರುವಿಕೆಯ ಆವಿಷ್ಕಾರವೂ ಸ್ಪೇಸ್ ತಂತ್ರಜ್ಞಾನ ಜಗತ್ತಿಗೆ ನೀಡಿದ ಅತ್ಯುತ್ತಮ ಕೊಡುಗೆಗಳಲ್ಲೊಂದು ಎಂದರು.
ಸಂಸ್ಥೆಯ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಈಗಾಗಲೇ ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳನ್ನು ಅಳವಡಿಸುವ ಬದಲು ನೂತನ ತಾಂತ್ರಿಕ ಆವಿಷ್ಕಾರಗಳನ್ನು ಪ್ರಯತ್ನಿಸುವುದು ಉತ್ತಮ. ಶಿಕ್ಷಣ ಸಂಸ್ಥೆಗಳು ಒದಗಿಸುವ ಕಲಿಕಾ ಸಂಪನ್ಮೂಲಗಳನ್ನು ಸದ್ಬಳಕೆ ಮಾಡುವುದರೊಂದಿಗೆ ಛಲಭರಿತ ಕಾರ್ಯವೈಖರಿ ರೂಢಿಸಿಕೊಂಡಾಗ ಯಶಸ್ಸು ಸಾಧ್ಯ. ಸಮಾಜದಿಂದ ಹೊರಗುಳಿಯುವ ಕೆಲಸಗಳಿಂದ ದೂರವಿದ್ದು, ಸಮಾಜದಲ್ಲಿ ಗುರುತಿಸಿಕೊಳ್ಳುವಂತವರಾಗಿ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಹೊಸ ಉದ್ಯಮ, ತಂತ್ರಜ್ಞಾನಗಳ ಬಳಕೆ ಮತ್ತು ಇನ್ಕ್ಯುಬೇಶನ್ ಸೆಂಟರ್ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲ ಡಾ. ಜೋಸೆಫ್ ಎನ್ ಎಂ, ಏರೋಡೈನಾಮಿಕ್ಸ್ ಪ್ರೊಪ್ರೈಟರ್ ದೇವಿಪ್ರಸಾದ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಉಪನ್ಯಾಸಕ ದತ್ತಾತ್ರೇಯ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಐಶ್ವರ್ಯ ಪ್ರಾರ್ಥಿಸಿದರು, ಉಪನ್ಯಾಸಕಿ ಡಾ. ನಂದಿನಿ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق