ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಎರಡು ಕಾರುಗಳ ನಡುವೆ ಅಪಘಾತ

ಎರಡು ಕಾರುಗಳ ನಡುವೆ ಅಪಘಾತ

 


ಬೆಂಗಳೂರು: ಇಲ್ಲಿಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೆತುವೆ ಹತ್ತಿರ ಅಪಘಾತ ನಡೆದಿದ್ದು, ಕೆ.ಆರ್. ಮಾರುಕಟ್ಟೆ ಹತ್ತಿರ ಇರುವ ಮೇಲ್ಸೆತುವೆ ಹತ್ತಿರವೇ ಈ ಅಪಘಾತ ನಡೆದಿದೆ.


ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಅಪಘಾತದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು.


ಇದರಿಂದಾಗಿ ಕಾರ್ಪೋರೇಷನ್ ಸುತ್ತ ಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.


ನಿಯಂತ್ರಣ ತಪ್ಪಿ ಸ್ವಿಫ್ಟ್ ಡಿಸೈರ್ ಕಾರ್ ಗೆ ಇನ್ನೊಂದು ಕಾರು ಗುದ್ದಿದ್ದು, ಈ ವೇಳೆ ಮಧ್ಯದಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನಕ್ಕೂ ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ ರಸ್ತೆ ಬದಿಯಲ್ಲಿದ್ದ ಕಂಬ ಕೂಡ ಕಾರಿನ ಮೇಲೆ ಬಿದ್ದಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.


0 تعليقات

إرسال تعليق

Post a Comment (0)

أحدث أقدم