ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌'ನಲ್ಲಿ ಸಾಧನೆ ಮಾಡಿದ 2 ವರ್ಷದ ಬಾಲಕ!

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌'ನಲ್ಲಿ ಸಾಧನೆ ಮಾಡಿದ 2 ವರ್ಷದ ಬಾಲಕ!

ಹುಬ್ಬಳ್ಳಿ: ಎರಡು ವರ್ಷದ  ಬಾಲಕ ಜನರಲ್ ನಾಲೆಡ್ಜ್, ಅಂಕಿ-ಸಂಖ್ಯೆಗಳನ್ನು ಎಳ್ಳು ಹುರಿದಂತೆ ಹೇಳುತ್ತಾನೆ. ಅಲ್ಲದೇ ವಿಶ್ವದ ಬಹುತೇಕ ರಾಷ್ಟ್ರದ ನಕ್ಷೆಯನ್ನು ನೋಡುತ್ತಲೇ ದೇಶವನ್ನು ಗುರುತಿಸುತ್ತಾನೆ. 2 ವರ್ಷದಲ್ಲಿಯೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌-2022ನಲ್ಲಿ ಸಾಧನೆ ಮಾಡಿ, ತಂದೆ-ತಾಯಿಗೆ ಮಾತ್ರವಲ್ಲದೇ ಇಡೀ ಜಿಲ್ಲೆಗೆ ಹೆಸರು ತಂದಿದ್ದಾನೆ.

ಪಟಾಪಟ್ ಅಂತಾ ಕೇಳಿದ ಪ್ರಶ್ನೆಗೆಲ್ಲ ಉತ್ತರಿಸುವ ತೊದಲು ನುಡಿಯ ಈ ಕಂದನ ಹೆಸರು ಅಥರ್ವ ಎಸ್. ವಾಣಿಜ್ಯನಗರಿ ಹುಬ್ಬಳ್ಳಿಯ ಶಿರೂರ್ ಪಾರ್ಕ್ ನಿವಾಸಿಯಾದ ಪ್ರತಿಭಾ ಹಾಗೂ ಶರಣ್ ದಂಪತಿಯ ಪುತ್ರ. 

ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಅಮ್ಮನ ಮಡಿಲನ್ನೇ ತನ್ನ ಪಾಠಶಾಲೆಯನ್ನಾಗಿ ಮಾಡಿಕೊಂಡ ಅಥರ್ವ ಪುಟ್ಟ ವಯಸ್ಸಿನಲ್ಲಿಯೇ ಅರ್ಥಪೂರ್ಣ ಸಾಧನೆ ಮಾಡಿದ್ದಾನೆ. ಈ ಬಾಲಕನ ಸಾಧನೆಗೆ  ಹುಬ್ಬಳ್ಳಿಯ ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


0 تعليقات

إرسال تعليق

Post a Comment (0)

أحدث أقدم