ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭೀಕರ ರಸ್ತೆ ಅಪಘಾತ; 9ಮಂದಿ ಸಾವು,4ಮಂದಿಗೆ ಗಂಭೀರ ಗಾಯ

ಭೀಕರ ರಸ್ತೆ ಅಪಘಾತ; 9ಮಂದಿ ಸಾವು,4ಮಂದಿಗೆ ಗಂಭೀರ ಗಾಯ

 


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಬಫ್ಲಿಯಾಜ್ ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 9 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.


ಗುರುವಾರ ಸಂಜೆ ಪೂಂಚ್ ಜಿಲ್ಲೆಯ ಬಫ್ಲಿಯಾಜ್ ಪ್ರದೇಶದ ತರ್ರಾರನ್ ವಾಲಿ ಗಲಿ ಎಂಬಲ್ಲಿ ಟಾಟಾ ಸುಮೋ ಆಳವಾದ ಕಮರಿಗೆ ಬಿದ್ದು ಅಪಘಾತ ಸಂಭವಿಸಿದೆ.

ಮದುವೆ ಪಾರ್ಟಿಗೆ ತೆರಳುತ್ತಿದ್ದ ಇಬ್ಬರು ಮಕ್ಕಳು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ.


ಸುರನ್‌ ಕೋಟೆಯ ಮರ್ಹಾ ಪ್ರದೇಶದಲ್ಲಿನ ಮದುವೆ ಸಮಾರಂಭಕ್ಕೆ ಜನರನ್ನು ಕರೆದೊಯ್ಯುತ್ತಿದ್ದ ವಾಹನ ಗುರುವಾರ ಸಂಜೆ ಟರ್ರಾರನ್ ವಾಲಿ ಗಲಿಯಲ್ಲಿ ಆಳವಾದ ಕಮರಿಗೆ ಬಿದ್ದಿದೆ ಎಂದು ಪೂಂಚ್‌ ನ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಸಾಲ್ಯಾನ್ ನ ಗುಲಾಮ್ ರಬಾನಿ, ಮೊಹಮ್ಮದ್ ಫಝಲ್, ಮುಷ್ತಾಕ್ ಅಹ್ಮದ್, ಫಝಲ್ ಅಹ್ಮದ್, ಗುರ್ಸಾಯಿಯ ಗುಲಾಮ್ ಗಲಾನಿ ಮತ್ತು ದಂಗಲದ ಮೊಹಮ್ಮದ್ ಅಕ್ಬರ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಇತರರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ


ವಾಹನದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನ ಇದ್ದರು. 13 ಜನರನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ಗುರ್ಸಾಯಿಯ ಚಾಲಕ ಜಹೀರ್ ಅಬ್ಬಾಸ್ ಚಾಲನೆ ಮಾಡುತ್ತಿದ್ದು, ಗುಡ್ಡಗಾಡು ರಸ್ತೆಯಲ್ಲಿ ಅತಿವೇಗ, ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದು ಅಪಘಾತಕ್ಕೆ ಕಾರಣವೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

0 Comments

Post a Comment

Post a Comment (0)

Previous Post Next Post