ಬೆಂಗಳೂರು: ಮಾರ್ಚ್ ತಿಂಗಳಿನಿಂದಲೇ ಗೋಧಿ ವಿತರಣೆ ಕೊನೆಯಾಗಲಿದೆ. ಇದರ ಬದಲು ಏಪ್ರಿಲ್‌ನಿಂದ ಹೆಚ್ಚುವರಿಯಾಗಿ ಪ್ರತಿ ಸದಸ್ಯನಿಗೆ 1 ಕೆ.ಜಿ.ಅಕ್ಕಿ ವಿತಣೆಯಾಗಲಿದೆ.
ಇದುವರೆಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಕೋಟಾದಲ್ಲಿ ಪ್ರತಿ ಸದಸ್ಯನಿಗೆ 10 ಕೆ.ಜಿ. ಹಾಗೂ ಒಂದು ಪಡಿತರ ಕಾರ್ಡ್‌ಗೆ 2 ಕೆ.ಜಿ. ಗೋಧಿ ವಿತರಣೆ ಮಾಡಲಾಗುತ್ತಿತ್ತು. ಆದರೆ ಏಪ್ರಿಲ್ ತಿಂಗಳಿಂದ ಕೊರೊನಾ ಕಾರಣ ಕೇಂದ್ರ ಸರಕಾರ ವಿತರಣೆ ಮಾಡುತ್ತಿದ್ದ ತಲಾ 5 ಕೆ.ಜಿ. ಅಕ್ಕಿ ವಿತರಣೆಯ ಬಾಬತ್ತು ಮುಗಿಯಲಿದೆ.
ಪಡಿತರದಾರರಿಗೆ ಏಪ್ರಿಲ್‌ನಿಂದ ಪ್ರತಿ ಸದಸ್ಯನಿಗೆ ತಲಾ 5 ಕೆ.ಜಿ. ಅಕ್ಕಿ ಹಾಗೂ ಗೋಧಿ ಬದಲು ಪ್ರತಿ ಸದಸ್ಯನಿಗೆ 1 ಕೆ.ಜಿ. ಸೇರಿ 6 ಕೆ.ಜಿ. ಲಭ್ಯವಾಗಲಿದೆ. ಆದರೆ ಇನ್ಮುಂದೆ ಗೋಧಿ ವಿತರಣೆ ಇರುವುದಿಲ್ಲ ಎಂದು ಹೇಳಲಾಗಿದೆ.
ಮುಂದಿನ ದಿನಗಳಲ್ಲಿ ಈಗ ಬೆಂಬಲ ಬೆಲೆ ದರದಲ್ಲಿ ಖರೀದಿಸಿರುವ ರಾಗಿಯನ್ನು ಪ್ರತಿ ಸದಸ್ಯನಿಗೆ 1 ಕೆ.ಜಿ.ಯಂತೆ ವಿತರಿಸುವ ಸಾಧ್ಯತೆಯೂ ಇದೆ. ಹೀಗಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿಯಷ್ಟೇ ಪಡಿತರದಾರರಿಗೆ ಸಿಗಲಿದೆ.
إرسال تعليق