ಚಿಕ್ಕಮಗಳೂರು: ನಟ ಸೂರ್ಯ ಅವರ ‘ಇಟಿ’ ಹೊಸ ಸಿನಿಮಾ ನಾಗಲಕ್ಷ್ಮೀ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಗುರುವಾರ ಚಿಕ್ಕಮಗಳೂರು ಸೂರ್ಯ ಪ್ಲಾನ್ಸ್ ಕ್ಲಬ್ ವತಿಯಿಂದ ಬೃಹತ್ ಕಟೌಟ್‌ಗೆ ಹಾಲಿನ ಅಭಿಷೇಕ ಹಾಗೂ ಅಭಿಮಾನಿಗಳಿಗೆ ಸಿಹಿ ವಿತರಿಸಲಾಯಿತು.
ಪ್ಲಾನ್ಸ್ ಕ್ಲಬ್ ಅಧ್ಯಕ್ಷ ಸರವಣ ಮಾತನಾಡಿ ನಟ ಸೂರ್ಯ ಅವರ ಪ್ರತಿ ವರ್ಷ ಹುಟ್ಟುಹಬ್ಬದ ಅಂಗವಾಗಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ, ವೃದ್ದಾಶ್ರಮಗಳಿಗೆ ಊಟದ ವ್ಯವಸ್ಥೆ ಸೇರಿದಂತೆ ಸಾಮಾಜಿಕ ಕಾರ್ಯಗಳನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಪ್ಲಾನ್ಸ್ ಕ್ಲಬ್ ವತಿಯಿಂದ ಬ್ಯಾನರ್ ಪ್ರದರ್ಶನ ಮಾಡಿ ಮನವಿ ಮಾಡಿಕೊಂಡಿತು.
ಈ ಸಂದರ್ಭದಲ್ಲಿ ಪ್ಲಾನ್ಸ್ ಕ್ಲಬ್ ಅಧ್ಯಕ್ಷ ಸರವಣ, ಉಪಾಧ್ಯಕ್ಷ ವಿನೀತ್, ಕಾರ್ಯದರ್ಶಿ ಅಂತೋಣಿ, ಖಜಾಂಚಿ ಸುಮನ್, ಸಹ ಕಾರ್ಯದರ್ಶಿ ಆನಂದ್, ನಗರ ಅಧ್ಯಕ್ಷ ಅರುಣ್, ಕಾರ್ಯದರ್ಶಿ ಪ್ರಭು, ಉಪಾಧ್ಯಕ್ಷ ಕಾರ್ತೀ, ಖಜಾಂಚಿ ನವೀನ್, ಸಹ ಕಾರ್ಯದರ್ಶಿ ವಿನು ಮತ್ತಿತರರು ಇದ್ದರು.
إرسال تعليق