ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಿಲಿಕಾನ್ ಸಿಟಿಯಲ್ಲಿ ಸಂಚಾರಿ ಪುಸ್ತಕ ಮಾರಾಟ: ಮೂರು ದಿನದ ಅಭಿಯಾನ, ಇಂದು, ನಾಳೆ, ನಾಡಿದ್ದು

ಸಿಲಿಕಾನ್ ಸಿಟಿಯಲ್ಲಿ ಸಂಚಾರಿ ಪುಸ್ತಕ ಮಾರಾಟ: ಮೂರು ದಿನದ ಅಭಿಯಾನ, ಇಂದು, ನಾಳೆ, ನಾಡಿದ್ದು

ರಿಯಾಯಿತಿ ದರದಲ್ಲಿ ಪುಸ್ತಕಗಳು ಲಭ್ಯ



ಬೆಂಗಳೂರು: ನಗರದ ಟಿಂಬರ್ ಯಾರ್ಡ್ ಲೇಔಟ್ ನ ಲಕ್ಷ್ಮಣ್ ಅವರ ಬಿ.ಎನ್.ಕ್ರಿಯೇಷನ್ ಮತ್ತು ತ್ಯಾಗರಾಜ ನಗರದ ರಾಧಾಕೃಷ್ಣ ಅವರ ರಾಧಾಕೃಷ್ಣ ಪ್ರಕಾಶನ ಸಹಯೋಗದಲ್ಲಿ ಪುಸ್ತಕ ಮಾರಾಟವನ್ನು  ನಗರದ ಬನಶಂಕರಿ 3ನೇ ಹಂತದ ಕತ್ತರಿಗುಪ್ಪೆಯ ಮೈಸೂರು ನರಸಿಂಹ ಉದ್ಯಾನವನದ ಪಕ್ಕದ ಪಾದಚಾರಿ ಮಾರ್ಗದ ಮೇಲೆ ಇಂದಿನಿಂದ 3 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.


ಈ ಪುಸ್ತಕ ಮಾರಾಟದ ವಿಶೇಷತೆ ಏನೆಂದರೆ ಇದೊಂದು ವಿಶೇಷ ಅಭಿಯಾನವಾಗಿದ್ದು, ಸಂಚಾರಿ ಪುಸ್ತಕ ಮಾರಾಟ ಕೇಂದ್ರದಲ್ಲಿ ಮಾರ್ಚ್ 13ರ ಇಂದು ಹಲವು ಪುಸ್ತಕ ಅಭಿಮಾನಿಗಳು ಬಂದು ಪುಸ್ತಕ  ಕೊಂಡುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.   


ಬನಶಂಕರಿ 3ನೇ ಹಂತದ ಜನತಾ ಬಜಾರ್ ನ ಮೈಸೂರು ನರಸಿಂಹ ಸ್ವಾಮಿ ಉದ್ಯಾನವನದ ಬಳಿ  ಮಾತನಾಡಿದ ಬಿ.ಎನ್. ಕ್ರೀಯಷನ್ ಪ್ರಕಾಶನದ ಮಾಲೀಕರಾದ ಲಕ್ಷ್ಮಣ್ ಸಂಚಾರಿ ಪುಸ್ತಕ ಮಾರಾಟವನ್ನು ಇಂದಿನಿಂದ ಮಾರ್ಚ್‌ 15ರ ವರೆಗೆ ಬನಶಂಕರಿ ಮೂರನೇ ಹಂತದಲ್ಲಿ ಕೈಗೊಂಡಿರುವುದಾಗಿ ಮಾಧ್ಯಮಕ್ಕೆ  ತಿಳಿಸಿ ಪ್ರತಿ 3 ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಸಂಚಾರಿ ಪುಸ್ತಕ ಮಾರಾಟ ಕೇಂದ್ರದ ಸ್ಥಳವನ್ನು ನಗರದ ವಿವಿಧ ಪ್ರದೇಶಗಳಲ್ಲಿ ಬದಲಾವಣೆ ಮಾಡುವುದಾಗಿ ನುಡಿದರು. 


ಪುಸ್ತಕ ರಚನೆ, ವಿತರಣೆ, ಪ್ರದರ್ಶನ, ಮಾರಾಟ ಎಲ್ಲವನ್ನೂ ಒಳಗೊಂಡ ಪರಿಪೂರ್ಣ ಯಜ್ಞ. ಪುಸ್ತಕ ಮನಸ್ಕತೆಯನ್ನು ಜನರಲ್ಲಿ ಮೂಡಿಸುವುದೂ  ಹಾಗು ಒಳ್ಳೆಯ ಅಭಿರುಚಿಯ ಪುಸ್ತಕವನ್ನು  ಓದುಗರಿಗೆ    ಕಡಿಮೆ ಬೆಲೆಯಲ್ಲಿ ತಲುಪಿಸುವುದು ನಮ್ಮ ಪ್ರಕಾಶನದ ಉದ್ದೇಶ ಎನ್ನುತ್ತಾರೆ ಲಕ್ಷ್ಮಣ್. ನನಗೆ ಯಾವುದೇ ರೀತಿಯ ಪ್ರಚಾರ ಬೇಡ ಒಳ್ಳೆಯ ಪುಸ್ತಕಗಳು ಓದುಗರಿಗೆ ತಲುಪಲಿ ಎನ್ನುತ್ತಾರೆ.  


"10 ರೂಪಾಯಿ ಹಾಗೂ 20 ರೂಪಾಯಿಗೆ ಇಲ್ಲಿ ಹಲವು ಪುಸ್ತಕ ಲಭ್ಯ" 


ಮನೆಯಲ್ಲಿ ಡಾಕ್ಟರ್, ಔಷಧಿ, ಹಣ್ಣು, ತರಕಾರಿ, ಆಧ್ಯಾತ್ಮ ಪುಸ್ತಕಗಳು, ಪುರಂದರ ದಾಸರ ಪದಗಳು, ಕನ್ನಡ ಬಾಲ ಬೋಧೆ, ಹಕ್ಕಿಗಳ ಬಗ್ಗೆ, ಬಣ್ಣಗಳ ಬಗ್ಗೆ, ಬಣ್ಣ ಹಚ್ಚುವ ಪುಸ್ತಕ, ಕಾಪಿ ಪುಸ್ತಕ- ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರರ ಕುರಿತು ಪುಸ್ತಕಗಳು ಇಲ್ಲಿ ಲಭ್ಯ. ಇಲ್ಲಿ ಹಲವು ಪುಸ್ತಕಗಳ ಬೆಲೆ 10 ರೂಪಾಯಿ ಹಾಗೂ 20 ಹಾಗೂ ಇನ್ನು ಕೆಲವು ಪುಸ್ತಕಗಳ ಮುಖ ಬೆಲೆಯ ಮೇಲೆ ಡಿಸ್ಕೌಂಟ್ ಹಾಗೂ ಮುಖ ಬೆಲೆಗೆ ಮಾರಾಟ ಮಾಡಲಾಗುತ್ತದೆ.


ಇಂದೊಂದು ವಿಶೇಷ ಅಭಿಯಾನವಾಗಿದ್ದು ಪುಸ್ತಕ ಪ್ರಿಯರಿಗೆ ರಸದೌತಣ ಎಂದರೇ ಅತಿಶಯೋಕ್ತಿ ಅಲ್ಲ? ಇಂದಿನ ದಿನಗಳಲ್ಲಿ ನಾವೆಲ್ಲರೂ ಜಂಗಮ ವಾಣಿಗೆ ಜೋತು ಬಿದ್ದಿರುವ ನಾವುಗಳು ಇಂತಹ ವಿಶೇಷ  ಅಭಿಯಾನ ನಡೆಸುತ್ತಿರುವ ನಗರದ ಟಿಂಬರ್ ಯಾರ್ಡ್ ಲೇಔಟ್ ನ ಲಕ್ಷ್ಮಣ್ ಅವರ ಬಿ.ಎನ್. ಕ್ರೀಯಷನ್  ಮತ್ತು ತ್ಯಾಗರಾಜ ನಗರದ ರಾಧಕೃಷ್ಣ ಅವರ ಶ್ರೀ ರಾಧಾಕೃಷ್ಣ ಪ್ರಕಾಶನ ಅವರಿಗೆ ಅವರ ಬಳಿ ಅತಿ ಕಡಿಮೆ   ದರದಲ್ಲಿ ಸಿಗುತ್ತಿರುವ ಪುಸ್ತಕ ಕೊಂಡುಕೊಳ್ಳುವ ಮೂಲಕ ಅವರ ಸಂಚಾರಿ ಪುಸ್ತಕ ಮಾರಾಟ ಅಭಿಯಾನ ಕ್ಕೆ  ಕೈಜೋಡಿಸುವ ಮನಸ್ಸು ಮಾಡೋಣ ಅಲ್ಲವೇ?

ಇವರ ಬಳಿ ಹಲವು ವಿಶೇಷ ಪುಸ್ತಕಗಳು ಲಭ್ಯವಿದ್ದು ಲಕ್ಷ್ಮಣ್ ಅವರ ಸಂಪರ್ಕ ಸಂಖ್ಯೆ: 9986856519


ಚಿತ್ರ: ಸಂದರ್ಶನ ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم