ಮಂಗಳೂರು: ವಾಮಂಜೂರಿನ ದೇವರಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಂಡಿಕಾ ಹೋಮ ಮತ್ತು ವಾರ್ಷಿಕ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಇಂದು ಮತ್ತು ನಾಳೆ (ಮಾ.11-12) ನಡೆಯುತ್ತಿವೆ.
ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಇಂದು ಬೆಳಗ್ಗೆ ಚಂಡಿಕಾ ಹೋಮ ನಡೆದಿದ್ದು, ಮಧ್ಯಾಹ್ನ ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5:30ರಿಂದ ಪುಣ್ಯಾಹ ವಾಸ್ತು, ನಂತರ ರಂಗಪೂಜೆ ನಡೆಯಲಿದೆ.
ನಾಳೆ (ಮಾ.12) ಪುಣ್ಯಾಹ ಗಣಪತಿ ಹೋಮ, ನವಕ ಕಲಶ ಪೂಜೆ, ಪರಿವಾರ ದೈವ ದೇವರುಗಳಿಗೆ ಕಲಶಪೂಜೆ, ಶ್ರೀ ಸೂಕ್ತ ಹೋಮ, ಆಶ್ಲೇಷಾ ಬಲಿ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5:30ರಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ, ರಾತ್ರಿ 9ರಿಂದ ಅಣ್ಣಪ್ಪ ಪಂಜುರ್ಲಿ , ಚಾಮುಂಡಿ ಗುಳಿಗ ಮತ್ತು ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ನಡೆಯಲಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق