ಮಂಗಳೂರು: ಕಾಸರಗೋಡು ಮೂಲದ ಪ್ರತಿಭೆಗಳೇ ಅಧಿಕ ಸಂಖ್ಯೆಯಲ್ಲಿರುವ ಶಿರಡಿ ಸಾಯಿ ಬಾಲಜಿ ಫಿಲಂಸ್ ನಿರ್ಮಾಣದಲ್ಲಿ ಮಂಗಳೂರು ಮೂಲದ ಗುರುರಾಜ್ ಜೇಷ್ಠ ಅವರ ನಿರ್ದೇಶನದ ಚೊಚ್ಚಲ ಸಿನಿಮಾ “ಹರೀಶ ವಯಸ್ಸು 36” ಮಾರ್ಚ್ 11ರಂದು ಬಿಡುಗಡೆಗೊಳ್ಳಲಿದೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಯೋಗಿಶ್ ಶೆಟ್ಟಿ ಕಡಂಬಾರ್ ಅವರು ಪೂರ್ಣ ಪ್ರಮಾಣದ ನಾಯಕನಟನಾಗಿ ಅಭಿನಯಿಸಿರುವ ಚಿತ್ರದಲ್ಲಿ ಜಿಲ್ಲೆಯ ಪ್ರತಿಭೆಗಳಾದ "ಸೈಮಾ ಪ್ರಶಸ್ತಿ" ವಿಜೇತ ಪ್ರಕಾಶ್ ತೂಮಿನಾಡು, ರಾಧಾಕೃಷ್ಣ ಕುಂಬಳೆ, ವಿಜಯ ಮಯ್ಯ ಐಲ ಅಭಿನಯಿಸಿದ್ದಾರೆ.
ಕನ್ನಡ, ತುಳು, ಮಲೆಯಾಳ ಹೀಗೆ ತ್ರಿಭಾಷಾ ಚಿತ್ರೊದ್ಯಮದಲ್ಲಿ ಪಳಗಿದ ಎಣ್ಮಕಜೆ ಪಂಚಾಯತ್ ನಿವಾಸಿ ಮೋಹನ್ ಪಡ್ರೆ ಅವರು ಛಾಯಾಗ್ರಹಣ ಹಾಗೂ ರಾಜೇಶ್ ಬಂದ್ಯೋಡು, ರವಿ ಎಂ.ಎಸ್. ವರ್ಕಾಡಿ ಕಲಾ ನಿರ್ದೇಶನದಲ್ಲಿ ಸಹಕರಿಸಿದ್ದಾರೆ.
ಗಡಿನಾಡು ಕಾಸರಗೋಡಿನ ಕೃಷ್ಣ ಥಿಯೇಟರ್ ಹಾಗೂ ಕರಾವಳಿಯ ದ.ಕ.ಜಿಲ್ಲೆ ಮಂಗಳೂರಿನ S.P. ಸಿನಿಮಾಸ್, PVR ಸಿನಿಮಾಸ್, ಭಾರತ್ ಸಿನಿಮಾಸ್, ಸಿನಿ ಪೊಲಿಸ್ ಹಾಗೂ ಸುರತ್ಕಲ್ ಸಿನಿ ಗ್ಯಾಲಕ್ಸಿ, ಮಣಿಪಾಲದ INOX, ಭಾರತ್ ಸಿನಿಮಾಸ್, ಕುಂದಾಪುರದ ಭಾರತ್ ಸಿನಿಮಾಸ್, ಸುಳ್ಯ ಸಂತೋಷ್, ಮೂಡಬಿದ್ರೆಯ ಅಮರಶ್ರೀ,ಕಾರ್ಕಳದ ಪ್ಲಾನೆಟ್, ಬೈಂದೂರು ಶಂಕರ್ ಥಿಯೇಟರ್ ನಲ್ಲಿ ಹಾಗೂ ಕರ್ನಾಟಕದಾದ್ಯಂತ ಈ ಸಿನಿಮಾ ಪ್ರದರ್ಶನ ಕಾಣಲಿದೆ ಎಂದು ಚಿತ್ರದ ನಿರ್ಮಾಪಕರಾದ ಲಕ್ಷ್ಮೀಕಾಂತ್ ಹೆಚ್.ವಿ.ರಾವ್, ತ್ರಿಲೋಕ್ ಕುಮಾರ್ ಝಾ, ಚಿಂತಕುಂಟ ಶ್ರೀದೇವಿ, ವಿ. ರಜನಿ ಜಂಟಿಯಾಗಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق