ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾರು ಚಾಲಕನ ಕೈ ಕಾಲು ಕಟ್ಟಿ ನೇಣು ಬಿಗಿದು ವ್ಯಕ್ತಿ ಸಾವು

ಕಾರು ಚಾಲಕನ ಕೈ ಕಾಲು ಕಟ್ಟಿ ನೇಣು ಬಿಗಿದು ವ್ಯಕ್ತಿ ಸಾವು

 


ಬೆಳಗಾವಿ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಸಹೋದರ ಪರಪ್ಪ ಸವದಿಯವರ ಕಾರು ಚಾಲಕನ ಕೈ-ಕಾಲು ಕಟ್ಟಿ ನೇಣು ಬಿಗಿದಿರುವ ಘಟನೆಯೊಂದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.


ಮೃತ ಚಾಲಕನನ್ನು ದರೂರ ಗ್ರಾಮದ ಸಿದ್ಧಾರೂಢ ಶಿರಗುಪ್ಪಿ (25) ಎಂದು ಗುರುತಿಸಲಾಗಿದೆ.


ಸಿದ್ಧಾರೂಢ ಶಿರಗುಪ್ಪಿ ಕಳೆದ ಎರಡು ವರ್ಷಗಳಿಂದ ಪರಪ್ಪ ಸವದಿಯವರ ಕಾರು ಚಾಲಕನಾಗಿದ್ದರು.


ಆದರೆ, ತಡರಾತ್ರಿ ಅಥಣಿ ಪಟ್ಟಣದ ಆರ್​ಟಿಒ ಕಚೇರಿ ಸಮೀಪದಲ್ಲಿ ಕೈ-ಕಾಲು ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಚಾಲಕನ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

0 تعليقات

إرسال تعليق

Post a Comment (0)

أحدث أقدم