ಮೈಸೂರು: ಹುಚ್ಚು ನಾಯಿ ಕಡಿದು 35ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆಯೊಂದು ಜಿಲ್ಲೆಯ ಹುಣಸೂರು ನಗರದ ಕಲ್ಪತರು ವೃತ್ತದ ಬಳಿ ನಡೆದಿದೆ.
ಶಾಲಾ ಮಕ್ಕಳು ಸೇರಿದಂತೆ 35ಕ್ಕೂ ಹೆಚ್ಚು ಜನರಿಗೆ ಹುಚ್ಚು ನಾಯಿ ಕಡಿದು ಗಾಯ ಮಾಡಿದೆ. ಗಾಯಗೊಂಡವರಿಗೆ ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಾಯಿಗಳ ತೊಂದರೆಯಿಂದ ಸಾರ್ವಜನಿಕರು ಬಹಳ ತೊಂದರೆಗೆ ಒಳಗಾಗಿದ್ದಾರೆ. ಘಟನೆ ಬೆನ್ನಲ್ಲೇ ನಾಯಿಗಳ ಹಾವಳಿ ತಡೆಯುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق