ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೆಜ್ಜೇನು ದಾಳಿ: 9 ಮಂದಿಗೆ ಗಾಯ

ಹೆಜ್ಜೇನು ದಾಳಿ: 9 ಮಂದಿಗೆ ಗಾಯ


ಬಂಟ್ವಾಳ: ಜೇನುನೊಣದ ಗೂಡಿಗೆ ಗಿಡುಗ ಕುಟುಕಿದ ಕೋಪವನ್ನು ಜೇನು ನೊಣಗಳು ರಸ್ತೆಯಲ್ಲಿ ಹೋಗುತ್ತಿದ್ದ ಪಾದಚಾರಿಗಳಿಗೆ ಕಡಿದು ತೀರಿಸಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದ ಕಲಾಬಾಗಿಲು ಎಂಬಲ್ಲಿ ಭಾನುವಾರ ನಡೆದಿದ್ದು, ಪರಿಣಾಮ‌ ಒಂಬತ್ತು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಕಲಾಬಾಗಿಲು ನಿವಾಸಿಗಳಾದ ಗಂಗಯ್ಯ ಗೌಡ (60) ಶೀನ ಶೆಟ್ಟಿ (48), ಐತಪ್ಪ ಶೆಟ್ಟಿ (76), ಅರುಣ್ ಶೆಟ್ಟಿ (34), ಲಲಿತಾ(49) ಸಹಿತ ಒಟ್ಟು 9 ಮಂದಿಗೆ ಜೇನು ನೊಣ ಕಚ್ಚಿದ್ದು, ಗಾಯಾಳುಗಳು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಇವರೆಲ್ಲರೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಗೆ ಸಂಬಂಧಿಸಿದ ಸಭೆಯನಲ್ಲಿ ಪಾಲ್ಗೊಳ್ಳಲೆಂದು  ಒಟ್ಟಾಗಿ ನಡೆದುಕೊಂಡು ಹೋಗಿತ್ತಿದ್ದ ವೇಳೆ ಏಕಾಏಕಿಯಾಗಿ ಜೇನು ನೊಣಗಳು ಪಾದಚಾರಿಗಳ ಮುಖದ ಮೇಲೆ ದಾಳಿ ನಡೆಸಿ ಕಚ್ಚಿವೆ.


ತಕ್ಷಣ ಪುಂಜಾಲಕಟ್ಟೆ ಆಸ್ಪತ್ರೆಯ 108 ಅಂಬ್ಯುಲೆನ್ಸ್ ಚಾಲಕ ಜಗನ್ನಾಥ್ ಶೆಟ್ಟಿ ಅವರು ಸಕಾಲದಲ್ಲಿ ಗಾಯಾಳುಗಳನ್ನು ಕರೆತಂದು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳುಗಳು ಹೆಚ್ಚಿನ ಅಪಾಯದಿಂದ‌ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕರ ಭೇಟಿ:

ಈ ಘಟನೆಯ ಬಗ್ಗೆ ಸುದ್ದಿ ತಿಳಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು‌ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಧೈರ್ಯ ತುಂಬಿದರು. ಸೂಕ್ತ ಚಿಕಿತ್ಸೆ  ನೀಡುವಂತೆ ವೈದ್ಯರಿಗೆ ಸೂಚಿಸಿದರು. ಈ ಸಂದರ್ಭ ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ ಶಾಸಕರೊಂದಿಗಿದ್ದರು. ಇರ್ವತ್ತೂರು ಗ್ರಾ.ಪಂ. ಸದಸ್ಯ ದಯಾನಂದ ಎರ್ಮೆನಾಡು, ಮಾಜಿ ಸದಸ್ಯ ಶಂಕರಶೆಟ್ಟಿ ಬೆದ್ರಮಾರ್ ಶಾಸಕರಿಗೆ ಘಟನೆಯ ಮಾಹಿತಿ ನೀಡಿದರು.

ಮಾಜಿ ಶಾಸಕ ರಮಾನಾಥ ರೈ ಭೇಟಿ:

ಬಂಟ್ವಾಳ: ಮೂಡು ಪಡುಕೋಡಿ ಗ್ರಾಮದ ಕಜೆಕೊಡಿ ಎಂಬಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮೀಟಿಂಗ್ ಗಾಗಿ ತೆರಳುತ್ತಿದ್ದವರು ಹಾಗೂ ಸ್ಥಳೀಯ ಗ್ರಾಮಸ್ಥರು ಸೇರಿದಂತೆ ಒಟ್ಟು ಒಂಬತ್ತು ಮಂದಿಗೆ ಜೇನುನೊಣ ದಾಳಿ ಮಾಡಿ ಗಾಯವಾಗಿತ್ತು. ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಜಿ ಸಚಿವ ಬಿ. ರಮಾನಾಥ ರೈ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.


ಈ ಸಂದರ್ಭದಲ್ಲಿ ಬಂಟ್ವಾಳ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ನಿಕಟಪೂರ್ವ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪದ್ಮಶೇಖರ್ ಜೈನ್, ಪುರಸಭಾ ಸದಸ್ಯರಾದ ವಾಸು ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಶಾಂತ ಜೈನ್, ಸುಧೀಂದ್ರ ಶೆಟ್ಟಿ, ಮತ್ತು ರಂಜಿತ್ ಪೂಜಾರಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم