ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 "ಸೇಫ್ ಫೀಟ್-ಸೇಫ್ ರೈಡ್" ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ

"ಸೇಫ್ ಫೀಟ್-ಸೇಫ್ ರೈಡ್" ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ



ಬೆಂಗಳೂರು: "ಸೇಫ್ ಫೀಟ್ - ಸೇಫ್ ರೈಡ್" ಮಧುಮೇಹ ಪಾದದ ಜಾಗೃತಿ ಮತ್ತು ತಪಾಸಣೆ ಅಭಿಯಾನ ಬೆಂಗಳೂರಿನಲ್ಲಿ ಶನಿವಾರ ಪ್ರಾರಂಭವಾಯಿತು.


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಆಯುಕ್ತ ರಂದೀಪ್ ಅವರು ಕರ್ನಾಟಕ ಎಂಡೋಕ್ರೊನಾಲಜಿ ಮತ್ತು ರೀಸರ್ಚ್ ಸಂಸ್ಥೆಯಲ್ಲಿ ಅಭಿಯಾನಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಫೂಟ್ ಸೆಕ್ಯೂರ್ ಸಂಸ್ಥಾಪಕ ಮತ್ತು ಭಾರತೀಯ ಪೊಡಿಯಾಟ್ರಿ ಅಸೋಸಿಯೇಷನ್ನ ಕರ್ನಾಟಕ ಕಾರ್ಯದರ್ಶಿ ಡಾ ಸಂಜಯ್ ಶರ್ಮಾ ಅಭಿಯಾನದ ನೇತೃತ್ವ ವಹಿಸಿದ್ದಾರೆ.


ಅಭಿಯಾನವನ್ನು ಕರ್ನಾಟಕ ಸರಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಮತ್ತು ಆರೋಗ್ಯಸೇವಾ ಬೆಂಬಲಿಸುತ್ತಿವೆ. ಜನ ಸಾಮಾನ್ಯರಲ್ಲಿ ಪಾದದ ಮಧುಮೇಹ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆರಂಭದಲ್ಲೇ ರೋಗ ಪತ್ತೆ ಮತ್ತು ಚಿಕಿತ್ಸೆಯ ಬಗ್ಗೆ ವೈದ್ಯರಿಗೆ ಶಿಕ್ಷಣ ನೀಡುವ ಗುರಿಯನ್ನು ಅಭಿಯಾನ ಹೊಂದಿದೆ.

 

ಮಧುಮೇಹ ಮತ್ತು ಪಾದದ ಸ್ಥಿತಿಗಳು


• ಭಾರತದಲ್ಲಿ, 2021ರಲ್ಲಿ ಅಂದಾಜು 74 ಮಿಲಿಯನ್ ಜನರು ಮಧುಮೇಹಿಗಳಾಗಿದ್ದರು.

• ಮಧುಮೇಹದಿಂದ ಪ್ರತಿ 20 ಸೆಕೆಂಡಿಗೆ ಒಂದು ಅಂಗ ಊನವಾಗುತ್ತದೆ. ಪ್ರಪಂಚದಾದ್ಯಂತ ಸುಮಾರು 200 ಮಿಲಿಯನ್ ಜನರಿಗೆ ಅವರ ಜೀವಿತಾವಧಿಯಲ್ಲಿ ಮಧುಮೇಹದಿಂದ ಪಾದದ ಹುಣ್ಣುಗಳಾಗುತ್ತವೆ.

• ಭಾರತದಲ್ಲಿ ಸುಮಾರು 37 ಮಿಲಿಯನ್ ಜನರು ನರರೋಗವನ್ನು ಹೊಂದಿರುತ್ತಾರೆ ಎಂದು ಅಂದಾಜಿಸಲಾಗಿದೆ. ನರರೋಗವು ಸಾಮಾನ್ಯವಾಗಿ ಮರಗಟ್ಟುವಿಕೆ, ಜುಮ್ಮೆನಿಸುವಿಕೆ, ಸ್ನಾಯು ದೌರ್ಬಲ್ಯ ಮತ್ತು ನೋವಿಗೆ ಕಾರಣವಾಗುವ ಒಂದು ಅಥವಾ ಹೆಚ್ಚಿನ ನರಗಳ ಹಾನಿ ಅಥವಾ ಊನಗೊಳಿಸುತ್ತದೆ. ಇದು ಹೆಚ್ಚಾಗಿ ಮಧುಮೇಹ ರೋಗಿಗಳ ಕೈ ಮತ್ತು ಕಾಲುಗಳ ಮೇಲೆ ಪರಿಣಾಮ ಬೀರುತ್ತದೆ.

• 24 ಮಿಲಿಯನ್ ಜನರು ಪಾದದ ಹುಣ್ಣನ್ನು ಹೊಂದುತ್ತಾರೆ. ಇವರಲ್ಲಿ 4 ಮಿಲಿಯನ್ ಜನರಿಗೆ ಅಂಗಚ್ಛೇದನಗಳಿಗೆ ಕಾರಣವಾಗುತ್ತದೆ, ಇವರಲ್ಲಿ 80% ರಷ್ಟು ಜನರಿಗೆ ಮುನ್ನೆಚ್ಚರಿಕೆ ವಹಿಸುವುದರಿಂದ ತಡೆಯಬಹುದು.



• ಮಧುಮೇಹ ರೋಗಿಗಳಲ್ಲಿ ಪ್ರಮುಖ ಅಂಗಚ್ಛೇದನದ ನಂತರದ 5 ವರ್ಷದ ಮರಣ ಪ್ರಮಾಣವು ಸುಮಾರು ಶೇ.50ರಷ್ಟಾಗಿದೆ. ಇದು ಕ್ಯಾನ್ಸರ್‌ನಿಂದ ಉಂಟಾಗುವ ಮರಣದ ಪ್ರಮಾಣವನ್ನೂ ಮೀರಿದೆ.


ಹಂತ 1- ಮಾರ್ಚ್ ನಿಂದ ಸೆಪ್ಟೆಂಬರ್ 2022 - ವೈದ್ಯಕೀಯ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು


ಮಾರ್ಚ್ 26ರಂದು ಈ ಯೋಜನೆಗೆ ಚಾಲನೆ ನೀಡಿದ ನಂತರ, ಪಾದದ ಮಧುಮೇಹ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಯ ಬಗ್ಗೆ ವೈದ್ಯರು, ಶಸ್ತ್ರಚಿಕಿತ್ಸಕರು ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಕರ್ನಾಟಕದಾದ್ಯಂತ ವೈದ್ಯಕೀಯ ಕಾಲೇಜುಗಳು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಜಾಗೃತಿ ಕಾರ್ಯಕ್ರಮ, ಕಾರ್ಯಾಗಾರಗಳು, ವೆಬಿನಾರ್‌ಗಳನ್ನು ನಡೆಸಲಾಗುವುದು. ಮುಂದಿನ ಹಂತದ ಜಾಗೃತಿ ಅಭಿಯಾನಕ್ಕಾಗಿ ನೊಂದಣಿ ಪ್ರಕ್ರಿಯೆ 2022ರ ಸೆಪ್ಟೆಂಬರ್ 9 ರಿಂದ 29ರ ವರೆಗೆ ನಡೆಯಲಿದೆ.


"ಭಾರತದಲ್ಲಿ ಪಾದದ ಮಧುಮೇಹದ ಪ್ರಸ್ತುತ ವಿಧಾನವು ವೈವಿಧ್ಯಮಯವಾಗಿದೆ ಮತ್ತು  ಪರಿಣತಿ ಹೊಂದಿರುವ ವೈದ್ಯರು, ಔಷಧದ ಶಾಖೆಯ ಮೇಲೆ ಅವಲಂಬಿತವಾಗಿದೆ. ಕಾಲುಗಳ ಅಸ್ವಸ್ಥತೆಗಳ ರೋಗ ಪತ್ತೆ ಮತ್ತು ಚಿಕಿತ್ಸೆಯೊಂದಿಗೆ ಪ್ರತ್ಯೇಕವಾಗಿ ಪರಿಗಣಿಸುವ ಕುರಿತು ವಿಶೇಷವಾದ ಪೊಡಿಯಾಟ್ರಿಯನ್ನು ಭಾರತೀಯ ವೈದ್ಯಕೀಯ ಕಾಲೇಜುಗಳಲ್ಲಿ ಕಲಿಸಲಾಗುತ್ತಿಲ್ಲ. ಮತ್ತು ಇದನ್ನು ಪ್ರತ್ಯೇಕ ವಿಭಾಗವಾಗಿ ಗುರುತಿಸಿಲ್ಲ ಮತ್ತು ಸರ್ವಸಮ್ಮತವಾಗಿ ಒಪ್ಪಿಕೊಳ್ಳುವುದಿಲ್ಲ. ಗ್ರಾಮ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಇರುವ ವೈದ್ಯರಲ್ಲಿ ಪಾದದ ಮಧುಮೇಹ ರೋಗವನ್ನು ತಡೆಗಟ್ಟಬಹುದು ಮತ್ತು ಅಂಗಚ್ಛೇದನವನ್ನು ತಡೆಗಟ್ಟಲು ಸೂಕ್ತ ಸಮಯದಲ್ಲಿ ತಜ್ಞರಿಗೆ ಶಿಫಾರಸು ಮಾಡಲು ನಾವು ಜಾಗೃತಿ ಮೂಡಿಸುತ್ತೇವೆ,” ಎಂದು ಪೊಡಿಯಾಟ್ರಿಕ್ ಶಸ್ತ್ರಚಿಕಿತ್ಸೆಯಲ್ಲಿ USA ಮತ್ತು ಭಾರತದಲ್ಲಿ 10 ವರ್ಷಗಳ ಅನುಭವ ಹೊಂದಿರುವ ಡಾ. ಸಂಜಯ್ ಶರ್ಮಾ ಹೇಳಿದರು.


ಹಂತ 2- ಸೆಪ್ಟೆಂಬರ್ 2022- ಕರ್ನಾಟಕದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಬೈಕ್ ಸವಾರಿ ಮತ್ತು ಸ್ಕ್ರೀನಿಂಗ್ ಶಿಬಿರಗಳು


"ಮಧುಮೇಹ ರೋಗಿಗಳಲ್ಲಿನ ನರರೋಗದ ಸ್ಥಿತಿಯಿಂದಾಗಿ ಚಾಲನೆ ಮಾಡಲು ಅಸಮರ್ಥತೆಗೆ ಕಾರಣವಾಗುತ್ತವೆ. ಏಕೆಂದರೆ ಪಾದಗಳು ಸಂವೇದನಾ ರಹಿತವಾಗಿರುತ್ತವೆ, ಎಕ್ಸಲರೇಟರ್ ಅಥವಾ ಬ್ರೇಕ್‌ಗಳ ಮೇಲೆ ಒತ್ತಡವನ್ನು ಹೇರುವುದು ಅಥವಾ ಪ್ರಮಾಣವನ್ನು ನಿರ್ಣಯಿಸುವುದು ಕಷ್ಟವಾಗುತ್ತದೆ. ಇದು ಅಪಘಾತಗಳಿಗೆ ಕಾರಣವಾಗುತ್ತದೆ ಮತ್ತು ಸಾರ್ವಜನಿಕರಿಗೆ ಅಪಾಯವಾಗಲಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ನಾವು ರಾಜ್ಯದಾದ್ಯಂತ ಮೋಟಾರ್ ಸೈಕಲ್ ಡ್ರೈವ್ ಅನ್ನು ನಡೆಸಲು ನಿರ್ಧರಿಸಿದ್ದೇವೆ,” ಎಂದು ಡಾ ಸಂಜಯ್ ಶರ್ಮಾ ಹೇಳಿದರು.


ಮೊದಲ ಹಂತದ ಅಭಿಯಾನದಲ್ಲಿ ತರಬೇತಿ ಪಡೆದ ವೈದ್ಯರು ಮತ್ತು ವೈದ್ಯಕೀಯ ಸಮುದಾಯದ ಸ್ವಯಂಸೇವಕರ ತಂಡವು ಡಾ. ಸಂಜಯ್ ಶರ್ಮಾ ಅವರ ನೇತೃತ್ವದಲ್ಲಿ ಅಭಿಯಾನ ಪ್ರಾರಂಭಿಸಲು, ಪಾದದ ಮಧುಮೇಹ ತಡೆಗಟ್ಟುವ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಲಿದೆ.


9ನೇ ಸೆಪ್ಟೆಂಬರ್ 2022 ರಿಂದ 20 ದಿನಗಳ ಬೈಕ್ ಮೋರ್ಚಾ ಸಮಯದಲ್ಲಿ, ತಂಡವು ಕರ್ನಾಟಕದ 31 ಜಿಲ್ಲೆಗಳಲ್ಲಿ 3,500 ಕಿಲೋಮೀಟರ್ ಸಂಚರಿಸಲಿದೆ. ಸುಮಾರು 90 ಪ್ರಮುಖ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಪಾದದ ಮಧುಮೇಹದ ಕುರಿತು ಅರಿವು ಮೂಡಿಸಲಾಗುತ್ತದೆ ಮತ್ತು ತಪಾಸಣೆ ನಡೆಸಲಾಗುತ್ತದೆ. 15 ವೈದ್ಯಕೀಯ ಕಾಲೇಜುಗಳ ಮೂಲಕ ರಾಜ್ಯದ ಸುಮಾರು 300 ಚಿಕಿತ್ಸಕರು ಮತ್ತು ಸುಮಾರು 3,00,000 ಜನಸಂಖ್ಯೆಯನ್ನು ತಲುಪಲು ಅಭಿಯಾನವು ಯೋಚಿಸಿದೆ. ಪ್ರತಿ ಜಿಲ್ಲೆಯಲ್ಲಿ, ಸ್ಥಳೀಯವಾಗಿ ತರಬೇತಿ ಪಡೆದ ವೈದ್ಯರು ಮತ್ತು ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ನಡೆಯುವ ಈ ಸ್ಕ್ರೀನಿಂಗ್ ಶಿಬಿರಗಳಲ್ಲಿ ಸಹಾಯ ಮಾಡುತ್ತಾರೆ. ಮಧುಮೇಹ ಪಾದದ ಕಾಯಿಲೆಯಿಂದ ಉಂಟಾಗುವ ಹುಣ್ಣುಗಳು, ಅಂಗಚ್ಛೇದನಗಳು ಮತ್ತು ಮರಣವನ್ನು ತಡೆಗಟ್ಟುವುದು ಇದರ ಗುರಿಯಾಗಿದೆ.


ಈ ಅಭಿಯಾನಕ್ಕೆ ಸ್ವಯಂಸೇವಕರಾಗಲು ಬಯಸುವ ವೈದ್ಯಕೀಯ ಸಮುದಾಯದ ಯಾರಾದರೂ sanjay@footsecure.com ಮೂಲಕ ಡಾ ಸಂಜಯ್ ಶರ್ಮಾ ಅವರನ್ನು ಸಂಪರ್ಕಿಸಬಹುದು.


ಡಾ ಸಂಜಯ್ ಶರ್ಮಾ ಅವರ ಕುರಿತು

ಡಾ. ಸಂಜಯ್ ಶರ್ಮಾ ಅವರು ಆರೋಗ್ಯ ರಕ್ಷಣೆ ವಿಷಯದಲ್ಲಿ 18 ವರ್ಷಗಳ ಅನುಭವವನ್ನು ಹೊಂದಿದ್ದಾರೆ. USA ಮತ್ತು ಭಾರತದಲ್ಲಿ ಪೊಡಿಯಾಟ್ರಿಕ್ ಶಸ್ತ್ರಚಿಕಿತ್ಸೆಯಲ್ಲಿ 10 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರು ಯುಎಸ್ಎಯ ಅರಿಜೋನಾದ ಬ್ಯಾನರ್ ಆಸ್ಪತ್ರೆಯಲ್ಲಿ ಡಾ ಡೇವಿಡ್ ಆರ್ಮ್ಸ್ಟ್ರಾಂಗ್ ಅವರ ಅಡಿಯಲ್ಲಿ ಡಯಾಬಿಟಿಕ್ ಫೂಟ್ / ಲಿಂಬ್ ಸಾಲ್ವೇಜ್ನಲ್ಲಿ ತರಬೇತಿ ಪಡೆದಿದ್ದಾರೆ. ಯುಕೆ ಗ್ಲ್ಯಾಸ್ಗೋದ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಆ್ಯಂಡ್ ಸರ್ಜನ್ಸ್ ನಿಂದ ಪೊಡಿಯಾಟ್ರಿಯಲ್ಲಿ (ಎಫ್ಎಫ್ಪಿಎಸ್) ಫೆಲೋಶಿಪ್ ಪಡೆದ ಭಾರತದ 7 ಶಸ್ತ್ರಚಿಕಿತ್ಸಕರಲ್ಲಿ ಡಾ.ಸಂಜಯ ಒಬ್ಬರು. ಅವರು ಮೆಡ್ಟೆಕ್ ಮತ್ತು ಟೆಲಿಮೆಡಿಸಿನ್ನಲ್ಲಿ ಪೇಟೆಂಟ್ಗಳನ್ನು ಹೊಂದಿದ್ದಾರೆ. ಅವರು ವರ್ಲ್ಡ್ ಎಕನಾಮಿಕ್ ಫೋರಮ್ನಿಂದ ಟೆಕ್ನಾಲಜಿ ಪಯೋನಿಯರ್ (ನ್ಯೂರೋಸಿನಾಪ್ಟಿಕ್ ಅನ್ನು ಪ್ರತಿನಿಧಿಸುವ) ಪ್ರಶಸ್ತಿಯನ್ನು ಪಡೆದಿದ್ದಾರೆ.


ಫುಟ್‌ ಸೆಕ್ಯೂರ್ ಕುರಿತು

ಫುಟ್‌ ಸೆಕ್ಯೂರ್ ಡಾ ಸಂಜಯ್ ಶರ್ಮಾ ಅವರು  ಸ್ಥಾಪಿಸಿರುವ, ಫೂಟ್ ಮತ್ತು ಆಂಕಲ್ ಕ್ಲಿನಿಕ್ಗಳ ಸಮಗ್ರ ಸರಪಣಿಯಾಗಿದ್ದು, ಯೋಗಕ್ಷೇಮ, ರೋಗ ಪತ್ತೆ, ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆ, ಆರ್ಥೋಟಿಕ್ಸ್ ಮತ್ತು ಪುನರ್ವಸತಿ ಸೇರಿದಂತೆ ಪೊಡಿಯಾಟ್ರಿಕ್ ಸೇವೆಗಳಿಗೆ ಮೀಸಲಾಗಿದೆ. ಪ್ರಸ್ತುತ ಫೂಟ್ ಸೆಕ್ಯುರ್ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ 5 ಪೊಡಿಯಾಟ್ರಿ ವಿಭಾಗಗಳನ್ನು ಸ್ಥಾಪಿಸಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post