ವಿಶ್ವ ಸಂಸ್ಥೆಯ ಪ್ರಮುಖ ಅಂಗವೆಂದರೆ ಭದ್ರತಾ ಸಮಿತಿ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಶಾಸಕಾಂಗವಿದ್ದ ಹಾಗೆ. ಅದೇ ಭದ್ರತಾ ಸಮಿತಿ ಕಾರ್ಯಾಂಗವಿದ್ದ ಹಾಗೆ. ಭದ್ರತಾ ಸಮಿತಿಯ ನಿಣ೯ಯಕ್ಕೆ ಹೆಚ್ಚಿನ ಮಹತ್ವವಿದೆ.
ಇಂದಿನ ರಷ್ಯಾ-ಉಕ್ರೇನ್ ಯುದ್ಧ ಸಂದರ್ಭದಲ್ಲಿ ವಿಶ್ವಸಂಸ್ಥೆಯೂ ತುಂಬಾ ಕ್ರಿಯಾಶೀಲವಾದ ಹಾಗೆ ಕಾಣುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಮೆರಿಕಾಕ್ಕೆ ಹೇಗಾದರೂ ಮಾಡಿ ತನ್ನ ಹುಟ್ಟು ವೈರಿ ರಷ್ಯಾವನ್ನು ಕಟ್ಟಿ ಹಾಕಬೇಕೆಂಬ ಕಾರಣಕ್ಕಾಗಿಯೇ ವಿಶ್ವಸಂಸ್ಥೆಯನ್ನು ತನ್ನ ಮನೆಯ ಅಸ್ತ್ರವಾಗಿ ಬಳಸಲು ಹೊರಟಿದೆ ಅನ್ನುವುದು ಅಷ್ಟೇ ಸತ್ಯ.
ಹಾಗಾಗಿ ಭದ್ರತಾ ಸಮಿತಿಯಲ್ಲಿ ಉಕ್ರೇನ್ ಮೇಲಿನ ರಷ್ಯಾ ಧಾಳಿ ಖಂಡಿಸುವ ನಿಣ೯ಯಕ್ಕೆ ತುತಾ೯ಗಿ ಕೈಹಾಕಿದೆ. ಭದ್ರತಾ ಸಮಿತಿಯಲ್ಲಿ ಸದಸ್ಯತ್ವ ಹೊಂದಿರುವ (non permanent) ಭಾರತಕ್ಕೆ ನಿಣ೯ಯದ ಪರವಾಗಿ ಮತಹಾಕುವಂತೆ ಒತ್ತಾಯಿಸುತ್ತಿದೆ.
ಆದರೆ ಭಾರತ ಮಾತ್ರ ಈ ಸಭೆಯಿಂದ ದೂರವಿದ್ದು ತಟಸ್ಥ ನೀತಿಯನ್ನು ಪಾಲಿಸಲು ಮುಂದಾಗಿದೆ. ಭಾರತದ ಈ ನಿಲುವು ನೂರಕ್ಕೆ ನೂರು ಸರಿ. ಆದ್ರೆ ಕಾಂಗ್ರೆಸ್ ರಾಷ್ಟೀಯ ನಾಯಕರೊಬ್ಬರು "ಸರಕಾರದ ಈ ತಟಸ್ಥ ನೀತಿ ತಪ್ಪು ರಷ್ಯಾದ ದಾಳಿಯನ್ನು ವಿರೇೂಧಿಸಿ ನಿರ್ಣಯಕ್ಕೆ ಬೆಂಬಲ ಸೂಚಿಸ ಬೇಕಿತ್ತು ಅನ್ನುವ ಹೇಳಿಕೆ ನೀಡಿದ್ದಾರೆ. ಅಂದರೆ ಕಾಂಗ್ರೆಸ್ ಹಿರಿಯರ ನಾಯಕರಿಗೆ ಅಮೆರಿಕಾದ ಈ ಹಿಂದಿನ ಯುದ್ಧ ನೀತಿಯೇ ಮರೆತು ಹೇೂದಂತಿದೆ. ಅದನ್ನು ನೆನಪಿಸುವ ಕೆಲಸ ನಾವು ಮಾಡ ಬೇಕಾಗಿದೆ.
ಇದೇ ಅಮೇರಿಕಾ ಎಲ್ಲಿ ಎಲ್ಲಾ ಅನ್ಯ ರಾಷ್ಟ್ರಗಳ ಜೊತೆ ತಾನಾಗಿಯೇ ಕಾಲು ಕೆದರಿ ಕೊಂಡು ಯುದ್ಧ ಮಾಡಿತ್ತೊ ಅ ಸಂದರ್ಭದಲ್ಲಿ ವಿಶ್ವಸಂಸ್ಥೆಯನ್ನು ಒಂದು ನಗಣ್ಯ ಸಂಸ್ಥೆಯಂದೇ ಪರಿಗಣಿಸಿತ್ತು. ಮಾತ್ರವಲ್ಲ ಇರಾಕ್ ನ ಸದ್ದಾಂ ಹುಸೇನ್ ನನ್ನು ಮುಗಿಸಬೇಕೆಂಬ ಒಂದೇ ಕಾರಣಕ್ಕೆ ತಾನಾಗಿಯೇ ಇರಾಕ್‍ನ ಮೇಲೆ ಯುದ್ಧ ಬಾಂಬುಗಳನ್ನು ಸಿಡಿಸಿದಾಗ ವಿಶ್ವ ಸಂಸ್ಥೆಯ ಖಾಯಂ ಸದಸ್ಯ ದೇಶಗಳಾದ ರಷ್ಯಾ ಮತ್ತು ಅನ್ಯ ರಾಷ್ಟ್ರಗಳು ವಿಶ್ವಸಂಸ್ಥೆಯಲ್ಲಿ ವಿರುದ್ಧ ಧ್ವನಿ ಎತ್ತಿದಾಗ ಕೂಡಾ ಗಾಳಿಗೆ ತೂರಿದ ದೇಶವಿದ್ದರೆ ಅದು ಅಮೆರಿಕಾ. ಆಗ ಈ ಭದ್ರತಾ ಸಮಿತಿಯ ನೆನಪಾಗಲಿಲ್ಲವಾ? ಈಗ ಅವರ ಅನುಕೂಲಕ್ಕಾಗಿ ನಾವು ಭದ್ರತಾ ಸಮಿತಿಯಲ್ಲಿ ಕುಣಿಯ ಬೇಕಾದ ಅನಿವಾರ್ಯತೆ ನಮಗೇನಿದೆ? ಅಮೆರಿಕಾದ ಈ ಹೆಜ್ಜೆ ನೈತಿಕವಾಗಿಯೂ ಬೆಂಬಲಿಸಲು ಸಾಧ್ಯವಾಗದ ನಿಣ೯ಯ. ಹಾಗಾಗಿ ಈ ಸಂದರ್ಭದಲ್ಲಿ ಭಾರತದ ನಿಣ೯ಯ ಸರಿ ಅನ್ನುವುದು ನನ್ನ ಖಚಿತ ಅಭಿಪ್ರಾಯ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment