ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೆಸರಾಂತ ಶಿಕ್ಷಕ ಪಿ. ಸುರೇಶ್ ರಾವ್ ಅವರ ಪ್ರಥಮ ವರ್ಷದ ಸಂಸ್ಮರಣಾ ಕಾರ್ಯಕ್ರಮ ಮಾ.20ರಂದು ಕೊಂಚಾಡಿಯಲ್ಲಿ

ಹೆಸರಾಂತ ಶಿಕ್ಷಕ ಪಿ. ಸುರೇಶ್ ರಾವ್ ಅವರ ಪ್ರಥಮ ವರ್ಷದ ಸಂಸ್ಮರಣಾ ಕಾರ್ಯಕ್ರಮ ಮಾ.20ರಂದು ಕೊಂಚಾಡಿಯಲ್ಲಿ


ಮಂಗಳೂರು: ಕೊಂಚಾಡಿ ಶ್ರೀ ರಾಮಾಶ್ರಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿ ಕೀರ್ತಿಶೇಷರಾದ ಪಿ. ಸುರೇಶ್ ರಾವ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಮಾ.20ರಂದು ಭಾನುವಾರ ಸಂಜೆ 4ರಿಂದ ಕೊಂಚಾಡಿ ಶ್ರೀ ರಾಮಾಶ್ರಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.


ಸಭಾ ಸಮಾರಂಭ, ಪುಣ್ಯಸ್ಮರಣೆ, ಸಮ್ಮಾನ ಕಾರ್ಯಕ್ರಮಗಳು ಸಂಜೆ 6 ಗಂಟೆಗೆ ನಡೆಯಲಿವೆ. ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ದಂಡೆಕೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಳೆ ವಿದ್ಯಾರ್ಥಿ ಸಂಘದ ಸಂಸ್ಥಾಪಕ ಸದಸ್ಯ ಜಯಂತ್ ಕುಮಾರ್ ಕೊಂಚಾಡಿ ಸಂಸ್ಮರಣಾ ಭಾಷಣ ಮಾಡಲಿದ್ದಾರೆ.


ಅಭ್ಯಾಗತರಾಗಿ ಕೊಂಚಾಡಿ ಎಜ್ಯುಕೇಶನಲ್‌ ಟ್ರಸ್ಟ್ ಬೋರ್ಡ್‌ ಸಂಚಾಲಕ ಡಾ. ಎನ್‌.ವಿ ಕಿಶೋರ್ ಕುಮಾರ್‌, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಸದಸ್ಯ ರಾಮ ಅಮೀನ್ ಪಚ್ಚನಾಡಿ, ಸಿವಿಲ್ ಗುತ್ತಿಗೆದಾರ ಕಮಲಾಕ್ಷ ಬಂಗೇರ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಹರುಷ ಶೆಟ್ಟಿ, ಕಾರ್ಪೊರೇಟರ್‌ಗಳಾದ ಶ್ರೀಮತಿ ರಂಜಿನಿ ಎಲ್ ಕೋಟ್ಯಾನ್, ಜಯಾನಂದ ಅಂಚನ್‌, ಶ್ರೀಮತಿ ಸಂಗೀತಾ ಆರ್‌. ನಾಯಕ್‌, ಕೊಂಚಾಡಿ ಎಜ್ಯುಕೇಶನಲ್ ಟ್ರಸ್ಟ್‌ ಬೋರ್ಡ್‌ ಕೋಶಾಧಿಕಾರಿ ಲೋಕೇಶ್ ಮೇರಿಹಿಲ್, ಶಾಲೆಯ ಮುಖ್ಯೋಪಾಧ್ಯಾಯರಾದ ಜಿ.ಎಸ್. ಮಂಜಪ್ಪ,  ಭೂ ನ್ಯಾಯ ಮಂಡಳಿ ಸದಸ್ಯ ಸಂದೀಪ್ ಬೋಂದೆಲ್, ಪಿ. ಸುರೇಶ್ ರಾವ್ ಅವರ ಕುಟುಂಬ ಸದಸ್ಯರಾದ ಜಯಂತಿ ಕೇಶವ ರಾವ್‌, ಶಿಕ್ಷಕ ರಕ್ಷಕ ಸಂಘದ ಗೌರವಾಧ್ಯಕ್ಷ ಜಯಂತ್ ಕುಮಾರ್ ಕೊಪ್ಪಲ, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಉಮೇಶ್ ದಂಡೆಕೇರಿ ಹಾಗೂ ಸಿವಿಲ್ ಎಂಜಿನಿಯರ್‌ ರಿತೀಶ್ ಕುಮಾರ್ ಕೊಪ್ಪಲ ಭಾಗವಹಿಸಲಿದ್ದಾರೆ.


ಸಂಜೆ 4:00 ಗಂಟೆಗೆ ಮಹಿಳಾ ಅರ್ಥಧಾರಿಗಳ ತಾಳಮದ್ದಳೆ- 'ಸಾಯುಜ್ಯ ಪದವಿ' ಹಾಗೂ 7 ಗಂಟೆಗೆ ಯಕ್ಷಗಾನ ಬಯಲಾಟ 'ಸುಧನ್ವ ಮೋಕ್ಷ' ಆಯೋಜಿಸಲಾಗಿದೆ.


ನಾಟಕ, ಯಕ್ಷಗಾನ ಕಲಾವಿದರು, ಕಲಾ ಸಂಘಟಕರಾದ ಪ್ರಭಾಕರ ಪಿ. ಕರ್ಕೇರ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಗುವುದು. ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನಾ ವೈವಿಧ್ಯ ನಡೆಯಲಿದೆ.


hit counter

0 Comments

Post a Comment

Post a Comment (0)

Previous Post Next Post