ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಹಿಳಾ ದಿನಾಚರಣೆ: ಉಳ್ಳಾಲ ಗೃಹರಕ್ಷಕ ದಳ ಮಹಿಳಾ ಸಿಬ್ಬಂದಿಗೆ ಸಮ್ಮಾನ

ಮಹಿಳಾ ದಿನಾಚರಣೆ: ಉಳ್ಳಾಲ ಗೃಹರಕ್ಷಕ ದಳ ಮಹಿಳಾ ಸಿಬ್ಬಂದಿಗೆ ಸಮ್ಮಾನ



ಮಂಗಳೂರು: ಮಹಿಳಾ ದಿನಾಚರಣೆಯ ಅಂಗವಾಗಿ ಇಂದು (ಮಾ.09) ಉಳ್ಳಾಲ ಘಟಕದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ದಿವ್ಯಾ- 69, ಪುಷ್ಪಲತಾ ಬಜಾಲ್ -159 ಇವರನ್ನು ಜಿಲ್ಲಾ ಸಮಾದೇಷ್ಟರಾದ ಡಾ. ಮುರಳಿ ಮೋಹನ ಚೂಂತಾರುರವರು ಗೌರವಿಸಿ ಸನ್ಮಾನಿಸಿದರು. ಹಾಗೂ ಮಹಿಳಾ ಗೃಹರಕ್ಷಕರಿಗೆ ಹೂಗುಚ್ಚ ನೀಡಿ ಗೌರವಿಸಿದರು.


2015 ರಲ್ಲಿ ಇಲಾಖೆ ಸೇರಿ ಹಲವಾರು ಕರ್ತವ್ಯ ನಿರ್ವಹಿಸಿರುವ ದಿವ್ಯಾರವರು ಪ್ರಸ್ತುತ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯನಿರತರಾಗಿದ್ದು,ಕಾರಾಗೃಹ, ಆರ್.ಟಿ.ಓ, ಕೆ.ಎಸ್.ಆರ್.ಟಿ.ಸಿ, ರೈಲ್ವೆ ಇಲಾಖೆಯಲ್ಲಿ ಹಾಗೂ ಕೋವಿಡ್ -19 ಕರ್ತವ್ಯವನ್ನೂ ಉತ್ತಮ ರೀತಿಯಲ್ಲಿ ನಿರ್ವಹಿಸಿರುತ್ತಾರೆ.


2015ರಲ್ಲಿ ಇಲಾಖೆಗೆ ಸೇರಿದ ಪುಪ್ಷಲತಾರವರು ಹಲವಾರು ಬಾರಿ ರಕ್ತದಾನ ಮಾಡಿ ಹೆಸರುವಾಸಿಯಾಗಿದ್ದಾರೆ. ಅಲ್ಲದೆ ಹಲವು ಸರಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಇವರು ಪ್ರಸ್ತುತ ಉಳ್ಳಾಲ ಠಾಣೆಯಲ್ಲಿ ಕರ್ತವ್ಯನಿರತರಾಗಿದ್ದಾರೆ.


ಕಾರ್ಯಕ್ರಮದಲ್ಲಿ ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಭಾಸ್ಕರ್, ಉಳ್ಳಾಲ ಘಟಕದ ಗೃಹರಕ್ಷಕ ಸುನೀಲ್ ಪೂಜಾರಿ, ಸಾರ್ಜೆಂಟ್ ಸುನೀಲ್ ಕುಮಾರ್, ಗೃಹರಕ್ಷಕರಾದ ಸೆಲೆಸ್ತಿನ್, ರೇಖಾ, ಯಶವಂತಿ, ಬಶೀರ್, ಪ್ರಕಾಶ್ ರವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post