ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪದವಿ ವಿದ್ಯಾರ್ಥಿ ಗಳ ಅಂಕಪಟ್ಟಿಯಲ್ಲಿ ಕ್ಯೂ ಆರ್ ಕೋಡ್ ಜಾರಿ

ಪದವಿ ವಿದ್ಯಾರ್ಥಿ ಗಳ ಅಂಕಪಟ್ಟಿಯಲ್ಲಿ ಕ್ಯೂ ಆರ್ ಕೋಡ್ ಜಾರಿ

 


ಮಂಗಳೂರು: ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಇದೀಗ ಕ್ಯು ಆರ್‌ ಕೋಡ್‌ ಅನುಷ್ಠಾನಕ್ಕೆ ಬಂದಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಮಹತ್ವದ ತೀರ್ಮಾನಕ್ಕೆ ಹೆಜ್ಜೆ ಹಾಕಿದೆ.

ಪದವಿ ವಿದ್ಯಾರ್ಥಿಗಳು ಇದೀಗ ಪಡೆಯುವ ಅಂಕಪಟ್ಟಿಯು ಕ್ಯುಆರ್‌ ಕೋಡ್‌ ನ್ನು ಒಳಗೊಂಡಿದೆ. ಮುಂದೆ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿಯೂ ಕ್ಯುಆರ್‌ ಕೋಡ್‌ ಜಾರಿಗೆ ಬರಲಿದೆ.

ಅಂಕಪಟ್ಟಿಯ ಜೊತೆಗೆ ವಿದ್ಯಾರ್ಥಿಯ ಪದವಿ ಪ್ರದಾನ ಸರ್ಟಿಫಿಕೆಟ್‌ನಲ್ಲಿಯೂ ಕ್ಯುಆರ್‌ ಕೋಡ್‌ ಸಿಸ್ಟಮ್‌ ಜಾರಿಯಾಗಲಿದೆ. ಸರ್ಟಿಫಿಕೆಟ್‌ ಹಾಗೂ ಡಿಪ್ಲೊಮಾ ಕೋರ್ಸ್‌ ಸರ್ಟಿಫಿಕೆಟ್‌ನಲ್ಲಿಯೂ ಇದು ಅನುಷ್ಠಾನ ವಾಗಲಿದೆ.

ಈ ಮೂಲಕ ಮೊದಲ ಬಾರಿಗೆ ಮಂಗಳೂರು ವಿ.ವಿ.ಯಲ್ಲಿ “ಬಾರ್‌ಕೋಡ್‌’ ಬದಲು ಭದ್ರತಾ ದೃಷ್ಟಿಯಿಂದ ಕ್ಯುಆರ್‌ ಕೋಡ್‌ ಜಾರಿಗೆ ಬಂದಿದೆ. ಕ್ಯುಆರ್‌ ಕೋಡ್‌ನಿಂದ ವಿದ್ಯಾರ್ಥಿಯ ಸಂಕ್ಷಿಪ್ತ ಮಾಹಿತಿಯನ್ನು ಮೊಬೈಲ್‌ ಮೂಲಕ ಪಡೆಯಲು ಸಾಧ್ಯವಾಗುತ್ತದೆ.

ಮೊದಲ ಬಾರಿಗೆ ಅಂಕಪಟ್ಟಿಯನ್ನು ಮಂಗಳೂರು ವಿ.ವಿ. ವತಿಯಿಂದಲೇ ಮುದ್ರಿಸಲಾಗಿದೆ. ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಜೊತೆಗೆ ಅಂಕಪಟ್ಟಿಯಲ್ಲಿ ಈ ಹಿಂದೆ ಪರೀಕ್ಷಾಂಗ ಕುಲಸಚಿವರು ಖುದ್ದು ಸಹಿ ಹಾಕುತ್ತಿದ್ದರು. ಆದರೆ ಮೊದಲ ಬಾರಿಗೆ ಕಂಪ್ಯೂಟರೀಕೃತಿ ಸಹಿ ಹಾಕಲಾಗಿದೆ.


hit counter

0 تعليقات

إرسال تعليق

Post a Comment (0)

أحدث أقدم