ಮಂಗಳೂರು: ರಾಮಕೃಷ್ಣ ಮಠ ಮಂಗಳೂರು ಹಾಗೂ ಸುರತ್ಕಲ್‌ನ ಚಿರಂತನ ಚ್ಯಾರಿಟೇಬಲ್ ಟ್ರಸ್ಟ್ ಆಯೋಜಿಸುತ್ತಿರುವ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಹಬ್ಬ- ಪಂಚಮದ ಇಂಚರ- ವಿವೇಕ ಸ್ಮೃತಿ 2022 ಇಂದು ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ನಡೆಯುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಬೆಳಗ್ಗೆ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮೀ ಜಿತಕಾಮಾನಂದಜಿ ಅವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು.
ವಿದುಷಿ ಅಪರ್ಣಾ ಕೇಲ್ಕರ್, ಪುಣೆ ಅವರಿಂದ ಗಾಯನ ಗೋಷ್ಠಿ ನಡೆಯಲಿದ್ದು ತಬಲಾದಲ್ಲಿ ಭಾರವಿ ದೇರಾಜೆ ಸುರತ್ಕಲ್, ಸಂವಾದಿನಿಯಲ್ಲಿ ಪ್ರಸಾದ್ ಕಾಮತ್ ಉಡುಪಿ ಅವರು ಸಾಥ್ ನೀಡಲಿದ್ದಾರೆ.
ನಂತರ ಬಾನ್ಸುರಿ ವಾದನವನ್ನು ಕಿರಣ್ ಹೆಗಡೆ ಮಗೆಗಾರ್ ನಡೆಸಿಕೊಡಲಿದ್ದಾರೆ. ಅವರಿಗೆ ಸಂವಾದಿನಿಯಲ್ಲಿ ವ್ಯಾಸಮೂರ್ತಿ ಕಟ್ಟಿ, ಬೆಂಗಳೂರು ಹಾಗೂ ತಬಲಾದಲ್ಲಿ ಗುರುಮೂರ್ತಿ ವೈದ್ಯ, ಬೆಂಗಳೂರು ಸಾಥ್ ನೀಡಲಿದ್ದಾರೆ.
ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಕ್ರಿಸ್ಟ್ ಎಲೆಕ್ಟ್ರಾನಿಕ್ಸ್ ಮಂಗಳೂರು ನೀಡುತ್ತಿದ್ದಾರೆ.
إرسال تعليق