ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಧೂರು ಶ್ರೀಕಾಳಿಕಾಂಬ ಮಠದಲ್ಲಿ "ಕರ್ತಾರ ಕಮ್ಮಟ" ಪತ್ರಿಕೋದ್ಯಮ ಕಾರ್ಯಾಗಾರ

ಮಧೂರು ಶ್ರೀಕಾಳಿಕಾಂಬ ಮಠದಲ್ಲಿ "ಕರ್ತಾರ ಕಮ್ಮಟ" ಪತ್ರಿಕೋದ್ಯಮ ಕಾರ್ಯಾಗಾರ


ಕಾಸರಗೋಡು: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠ ಕಟಪಾಡಿ ಇದರ  ಮುಖವಾಣಿಯಾದ "ಋಷಿ ಸ್ವರಂ" ಮಾಸ ಪತ್ರಿಕೆಯ ಆಶ್ರಯದಲ್ಲಿ "ಕರ್ತಾರ ಕಮ್ಮಟ" ಪತ್ರಿಕೋದ್ಯಮ ಕಾರ್ಯಗಾರ ಶನಿವಾರ ಮಧೂರು ಶ್ರೀಕಾಳಿಕಾಂಬ ಮಠದಲ್ಲಿ ಜರಗಿತು.


ಮಠದ ಅಧ್ಯಕ್ಷರಾದ ಎನ್ ಪರಮೇಶ್ವರ ಆಚಾರ್ಯ ನೀರ್ಚಾಲು ಕಾರ್ಯಗಾರವನ್ನು ಉದ್ಘಾಟಿಸಿದರು. ಶಿಬಿರಾಧಿಕಾರಿಯಾಗಿ ಆಚಾರ್ಯ ಡಾ.ಬಾಲಕೃಷ್ಣ ಬಿ.ಎಂ.ಹೊಸಂಗಡಿ ನೇತೃತ್ವದಲ್ಲಿ ನಡೆದ ಕಾರ್ಯಗಾರದಲ್ಲಿ ಪತ್ರಕರ್ತ ಜಯ ಮಣಿಯಂಪಾರೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.


ಋಷಿ ಸ್ವರಂ ಪ್ರಧಾನ ಸಂಪಾದಕರಾದ ವೈ ಧರ್ಮೇಂದ್ರ ಆಚಾರ್ಯ ಕಾಸರಗೋಡು, ಸಹ ಸಂಪಾದಕರಾದ ಲೋಕೇಶ್ ಎಂ.ಬಿ.ಆಚಾರ್ಯ ಕಂಬಾರ್, ಮಂಜುನಾಥ ಆಚಾರ್ಯ ಪೆರುವಾಯಿ ಮೊದಲಾದವರು ಮಾತನಾಡಿದರು. ಪುರೋಹಿತ್ ಮೌನೇಶ್ ಆಚಾರ್ಯ ಪುತ್ತಿಗೆ ಪ್ರಾರ್ಥನೆ ಹಾಡಿದರು. ಜಗದೀಶ್ ಆಚಾರ್ಯ ಕಂಬಾರ್ ಸ್ವಾಗತಿಸಿ ಕೆ.ನಾರಾಯಣ ಆಚಾರ್ಯ ವಂದಿಸಿದರು.  ಬಳಿಕ ನಡೆದ ಕಮ್ಮಟದಲ್ಲಿ ನಿಯತ ಕಾಲಿಕೆ,ಸುದ್ದಿ ಬರವಣಿಗೆ, ನುಡಿಚಿತ್ರಗಳ ಬಗ್ಗೆ ತರಬೇತಿ ನೀಡಲಾಯಿತು.


ಕಾರ್ಯಕ್ರಮದಲ್ಲಿ ಪುರೋಹಿತ ವಾಸುದೇವ ಆಚಾರ್ಯ, ಮಧುಸೂದನ ಆಚಾರ್ಯ ಕಾಸರಗೋಡು, ಪುರುಷೋತ್ತಮ ಆಚಾರ್ಯ ನೆಕ್ರಾಜೆ, ಯಕ್ಷಗಾನ ಕಲಾವಿದ ಬಾಲಕೃಷ್ಣ ಆಚಾರ್ಯ ನೀರ್ಚಾಲು,ತಾರನಾಥ ಆಚಾರ್ಯ ಮಧೂರು, ಮಹೇಶ್ ಆಚಾರ್ಯ, ದಿವ್ಯಾ ಬಿ.ಹೊಸಂಗಡಿ,ನಾಗರಾಜ ಆಚಾರ್ಯ,  ಮೇಘಶ್ರೀ ಪುತ್ತಿಗೆ, ಗಣೇಶ ಆಚಾರ್ಯ ಅಮೈ, ಮಂಜುನಾಥ ಆಚಾರ್ಯ ಪುತ್ತಿಗೆ,ಮೌನೇಶ್ ಆಚಾರ್ಯ ಕಾಸರಗೋಡು ಮೊದಲಾದವರು ಪಾಲ್ಗೊಂಡರು.

ಚಿತ್ರಗಳು: ಐಶ್ವರ್ಯ ಸ್ಟುಡಿಯೋ ಕಾಸರಗೋಡು

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم