ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲ್ಲೂಕಿನ ತಹಶೀಲ್ದಾರ್ ನಿನ್ನೆ ರಾತ್ರಿ ಹೃದಯಘಾತದಿಂದ ನಿಧನರಾಗಿದ್ದಾರೆ. ತಹಶೀಲ್ದಾರ್ ಸಂಗಮೇಶ್ ಬ್ಯಾಡಗಿ (38) ಅವರಿಗೆ ನಿನ್ನೆ ತಡ ರಾತ್ರಿ 2.30ರ ಸುಮಾರಿಗೆ ಹೃದಯಘಾತ ಸಂಭವಿಸಿದ್ದು, ಮುದೋಳ ನಗರದ ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ.
ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮುಧೋಳದ ಅವರ ನಿವಾಸಕ್ಕೆ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಮಲ್ಲಳ್ಳಿ ಸೇರಿದಂತೆ ವಿವಿಧ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮೃತರು ಅಥಣಿ ತಾಲ್ಲೂಕಿನ ಜನವಾಡದ ಮೂಲದವರು.
إرسال تعليق