ಕಾಸರಗೋಡು: ಕೋಟೂರು ಶ್ರೀ ಕಾರ್ತಿಕೇಯ ಭಜನಾ ಮಂದಿರ ನವೀಕರಣ ಯೋಜನೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಅವರು ಒಂದೂವರೆ ಲಕ್ಷ ಮೊತ್ತವನ್ನು ಅನುದಾನವಾಗಿ ನೀಡಿರುತ್ತಾರೆ.
ಮೊತ್ತದ ಡಿಡಿ ಯನ್ನು ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮುಕೇಶ್ ಅವರು ಸಮಿತಿಗೆ ಹಸ್ತಾ೦ತರಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವಿಭಾಗ ಮೇಲ್ವಿಚಾರಕರಾದ ಪ್ರಕಾಶ ಆಚಾರ್ಯ, ಲೆಕ್ಕ ಪರಿಶೋಧಕ ಬಾಲಕೃಷ್ಣ, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ವಾಮನ ಆಚಾರ್ಯ, ಶ್ರೀ ಕಾರ್ತಿಕೇಯ ಭಜನಾ ಮಂದಿರ ನವೀಕರಣ ಸಮಿತಿಯ ಅಧ್ಯಕ್ಷ ಗೋಪಾಲನ್ ಕೋಟೂರು, ಕಾರ್ಯದರ್ಶಿ ಪ್ರಕಾಶ್ ಕೋಟೂರು, ಕೋಶಾಧಿಕಾರಿ ಕೆ ವಿ ಮೋಹನ, ಮಾತೃ ಸಮಿತಿಯ ಸುನೀತಾ, ಗೀತಾ ಗೋಪಾಲನ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق