ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕನ್ನಡ ಸಂತ ಬಿ ಪುರುಷೋತ್ತಮರ ಮನೆಗೆ ಡಾ. ಸಿ ಸೋಮಶೇಖರ್ ಭೇಟಿ

ಕನ್ನಡ ಸಂತ ಬಿ ಪುರುಷೋತ್ತಮರ ಮನೆಗೆ ಡಾ. ಸಿ ಸೋಮಶೇಖರ್ ಭೇಟಿ


ಕಾಸರಗೋಡು: ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ನಾಡೋಜ ಕವಿ ಕಯ್ಯಾರ ಕಿಂಞ್ಞಣ್ಣ ರೈ ಅವರ ಹೆಸರಿನಲ್ಲಿ ಕೊಡಮಾಡುವ ಗಡಿನಾಡ ಚೇತನ ರಾಜ್ಯಪ್ರಶಸ್ತಿಗೆ ಭಾಜನರಾದ ಕಾಸರಗೋಡಿನ ಕನ್ನಡ ಸಂತ ಎಂದೇ ಗುರುತಿಸಿಕೊಂಡಿರುವ ಹಿರಿಯ ಕನ್ನಡ ಹೋರಾಟಗಾರ ಬಿ ಪುರುಷೋತ್ತಮ ಅವರ ಮನೆಗೆ ಕರ್ನಾಟಕ ಗಡಿ ಪ್ರದೇಶ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ ಸೋಮಶೇಖರ ಐ ಎ ಎಸ್ ಅವರು ಮತ್ತು  ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಅವರು ಭೇಟಿ ನೀಡಿದರು.


ಕಾಸರಗೋಡಿನ ಕನ್ನಡದ ಉಳಿವು ಹಾಗೂ ಬೆಳವಣಿಗೆಗಾಗಿ ನಿತ್ಯನಿರಂತರ ದುಡಿಯುತ್ತಿರುವ ಪುರುಷೋತ್ತಮ ಅವರ ಬಗ್ಗೆ ಅಭಿಮಾನದ ನುಡಿಗಳನ್ನಾಡಿದ ಡಾ. ಸಿ ಸೋಮಶೇಖರ ಅವರು ಪುರುಷೋತ್ತಮ ಅವರ ಅಮೂಲ್ಯವಾದ ಕನ್ನಡದ ಕಡತಗಳನ್ನು ಪರಿಶೀಲಿಸಿದರು. ಪುರುಷೋತ್ತಮ ಅವರು ಕಾಸರಗೋಡಿನ ಕನ್ನಡದ ಉಳಿವಿಗಾಗಿ ಮಾಡಿದ ಪ್ರಯತ್ನಗಳ ಬಗ್ಗೆ ದಾಖಲೆ ಸಮೇತ ವಿವರಿಸಿದ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಮಾತನಾಡಿ, “ಪುರುಷೋತ್ತಮರು ದಶಕಗಳಿಂದ ಕನ್ನಡದ ಕ್ರಿಯಾತ್ಮಕ ಕೈಂಕರ‍್ಯವನ್ನು ತಪಸ್ಸಿನಂತೆ ಮಾಡುತ್ತಿದ್ದಾರೆ. ಈ ಪ್ರತಿ ಕನ್ನಡದ ಕಡತಗಳು ಮುಂದಿನ ತಲೆಮಾರಿನ ಹಿತದೃಷ್ಟಿಯಿಂದ ಅತ್ಯಮೂಲ್ಯವಾದುವು. ಆದರೆ ಪುರುಷೋತ್ತಮರ ಮನೆಯಲ್ಲಿ ಅದನ್ನು ಸುರಕ್ಷಿತವಾಗಿಡುವ ಮೂಲಭೂತ ಸೌರ‍್ಯಗಳಿಲ್ಲ. ಈ ಕಾರಣಕ್ಕಾಗಿ ಅವರ ಬದುಕಿನ ಕನ್ನಡ ಸಾಧನೆಗಳನ್ನು ಕ್ರಮಬದ್ಧವಾಗಿ ದಾಖಲಿಸುವ ಕಾರ‍್ಯ ಗಡಿಪ್ರದೇಶ ಅಭಿವೃದ್ಧಿ ಪ್ರಾದಿಕಾರದಿಂದ ನಡೆಯಬೇಕಾಗಿದೆ” ಎಂದರು.   


ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ. ಸಿ. ಸೋಮಶೇಖರ ಅವರು ಪುರುಷೋತ್ತಮ ಅವರ ಬದುಕಿನ ಸಾಧನೆ ಹಾಗೂ ಅವರ ಶ್ರಮದ ಪ್ರತಿಯೊಂದು ಕಡತಗಳನ್ನು ಸುರಕ್ಷಿತವಾಗಿಡುವುದು ಮತ್ತು ದಾಖಲಿಸುವುದು ಅತೀ ಅನಿವಾರ‍್ಯ.  ಇದು ಮುಂದಿನ ಅಧ್ಯಯನ ಹಾಗೂ ತಿಳುವಳಿಕೆಗಳಿಗೂ ಪೂರಕವಾದುದು. ಈ ನಿಟ್ಟಿನಲ್ಲಿ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಹೆಚ್ಚಿನ ಕಾಳಜಿ ವಹಿಸುತ್ತದೆ. ಎಂದರು. 


ಕರ್ನಾಟಕ ಗಡಿ ಪ್ರದೇಶ ಪ್ರಾಧಿಕಾರದ ಕಾರ್ಯದರ್ಶಿ  ಪ್ರಕಾಶ್ ಮತ್ತೀಹಳ್ಳಿ, ಕಾಸರಗೋಡು ಜಿಲ್ಲಾ ಕಾರ‍್ಯನಿರತ ಪತ್ರಕರ್ತರ  ಸಂಘದ ಜಿಲ್ಲಾಧ್ಯಕ್ಷ ಎ ಆರ್ ಸುಬ್ಬಯ್ಯಕಟ್ಟೆ, ವಾಮನ ರಾವ್ ಬೇಕಲ್, ಡಾ. ರತ್ನಾಕರ ಮಲ್ಲಮೂಲೆ ಈ ಮುಂತಾದವರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم