ಮಂಗಳೂರು: ಮಹಾನಗರ ಪಾಲಿಕೆಯ ಕಂಕನಾಡಿ ವಾರ್ಡಿನ ಸದಾಶಿವ ನಗರ ಕಲ್ಲಕಟ್ಟೆಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಗಳೂರು ನಗರದಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನದಿಂದ ವಿವಿಧ ಕಡೆಗಳಲ್ಲಿ ಕಾಮಗಾರಿ ನಡೆಯುತ್ತಿದೆ. ನಗರದ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಲಾಗುತಿದೆ ಎಂದು ಶಾಸಕ ಕಾಮತ್ ಹೇಳಿದರು.
ನಗರದ ಹೊರ ವಲಯಗಳಲ್ಲೂ ಅವಶ್ಯಕ ಕಾಮಗಾರಿಗಳನ್ನು ಗುರುತಿಸಿ ಅನುದಾನ ಹೊಂದಿಸಲಾಗಿದೆ. ಕಾಲುಸಂಕ, ತಡೆಗೋಡೆ, ರಾಜಕಾಲುವೆಗಳ ಅಭಿವೃದ್ಧಿ ಸೇರಿದಂತೆ ಬೇಡಿಕೆಯಿರುವ ಎಲ್ಲಾ ಯೋಜನೆಗಳಿಗೆ ವಿಶೇಷವಾಗಿ ಗಮನಹರಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಮುಖಂಡರಾದ ಯಶೋಧರ ಚೌಟ, ಕಿರಣ್ ರೈ ಎಕ್ಕೂರು, ಎಂ ಮಾಧವ ಶೆಟ್ಟಿ, ದೇವಕಿ ಅಚ್ಯುತ ಗೌಡ, ಕೃಷ್ಣ ಬಂಗೇರ, ಗಣೇಶ್ ಎಂ.ಪಿ, ಸುಕೇಶ್, ಪ್ರೀತಮ್, ಲತಾ, ರೇಣುಕಾ ಶೆಟ್ಟಿ, ಸುಮತಿ, ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق