ಚಿತ್ರದುರ್ಗ: ಬೈಕ್ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆಯೊಂದು ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದ ಬಳಿ ನಡೆದಿದೆ.
ಮೃತಪಟ್ಟ ವ್ಯಕ್ತಿಗಳು ಒಂದೇ ಕುಟುಂಬದವರಾಗಿದ್ದು, ಬಿ.ದುರ್ಗ ಗ್ರಾಮದ ನಾಗರಾಜ್ (43), ಪತ್ನಿ ಶೈಲಜಾ (40), ಪುತ್ರ ವೀರೇಶ್ (15), ಸಂತೋಷ್ (13) ಸಾವಿಗೀಡಾಗಿದ್ದಾರೆ.
ಇವರು ಹೆಬ್ಬಳಗೆರೆ ಗ್ರಾಮದಿಂದ ಬೈಕಿನಲ್ಲಿ ಬಿ.ದುರ್ಗ ಗ್ರಾಮಕ್ಕೆ ತೆರಳುತ್ತಿದ್ದರು. ಒಂದೇ ಬೈಕಿನಲ್ಲಿ ನಾಲ್ವರು ಸಂಚಾರ ಮಾಡುತ್ತಿದ್ದರು.
ಒಂದೇ ಬೈಕ್ ನಲ್ಲಿ ನಾಲ್ವರು ಸಂಚಾರ ಮಾಡಿದ್ದು ಈ ಕುಟುಂಬದ ತಪ್ಪಾಗಿದ್ದು, ಮತ್ತೊಂದೆಡೆ ಖಾಸಗಿ ಬಸ್ ಚಾಲಕನ ಅಜಾಗರೂಕತೆಯಿಂದಲೂ ಈ ದುರಂತ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಒಮ್ಮೆಗೆ ಬಲಬದಿಗೆ ಬಸ್ ನುಗ್ಗಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೊಳಲ್ಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق