ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಡೊಂಗರಕೇರಿ ವಾರ್ಡಿನ ವಿಶಾಲ್ ನರ್ಸಿಂಗ್ ಹೋಮ್ ನಿಂದ ಈಶ್ವರ ಸ್ಥಾನದ ವರೆಗಿನ ರಸ್ತೆಯ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಮಂಗಳೂರು ನಗರದ ಮೂಲೆ ಮೂಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನಗರದ ಸಮಗ್ರ ಅಭಿವೃದ್ಧಿಯ ಗುರಿಯೊಂದಿಗೆ ಹೊಸ ಯೊಜನೆಗಳನ್ನು ತರಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ವಿಶಾಲ್ ನರ್ಸಿಂಗ್ ಹೋಮ್ ನಿಂದ ಈಶ್ವರ ಸ್ಥಾನದ ವರೆಗಿನ ರಸ್ತೆಗೆ ಇಂಟರ್ ಲಾಕ್ ಅಳವಡಿಸಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ಒದಗಿಸಲಾಗಿದೆ. ಸಾರ್ವಜನಿಕ ಬೇಡಿಕೆಯನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಸ್ಥಳೀಯ ಕಾರ್ಪೋರೇಟರ್ ಜಯಶ್ರೀ ಕುಡ್ವ, ಮುಖಂಡರಾದ ರಮೇಶ್ ಹೆಗ್ಡೆ, ದಿನಕರ್ ಶೆಟ್ಟಿ, ಚಂದ್ರಹಾಸ್ ಶೆಟ್ಟಿ, ನರಹರಿ ಪ್ರಭು, ಅಣ್ಣು ಪೂಜಾರಿ, ಗಣೇಶ್ ಪ್ರಸಾದ್, ಶರತ್ ಶೆಟ್ಟಿ, ಪುಷ್ಪ ಶೆಟ್ಟಿ, ನಂದಿನಿ, ಸಚಿನ್ ರೈ, ಅಕ್ಷತ್ ಕಾಮತ್, ವಸಂತ್ ಜೆ ಪೂಜಾರಿ, ಅರುಣ್ ಶೇಟ್, ರಾಜೇಶ್ ಪ್ರಭು, ಮೋಹನ್ ಆಚಾರ್, ಪ್ರವೀಣ್, ವರುಣ್ ಶೆಟ್ಟಿ, ಜನಾರ್ದನ್ ಕುಡ್ವ, ಕ್ಷೇತ್ರದ ಪ್ರಮುಖರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment