ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಜರಾಜೇಶ್ವರಿ ನಗರದ ಕಮಾನು ಮುಂಭಾಗದಲ್ಲಿ ಪಾದಚಾರಿಗಳಿಗೆ ಮಾರ್ಗವಿಲ್ಲದೆ ಪರಾದಾಟ: ಮುನಿರತ್ನ ಅವರೇ ಇತ್ತ ನೋಡಿ

ರಾಜರಾಜೇಶ್ವರಿ ನಗರದ ಕಮಾನು ಮುಂಭಾಗದಲ್ಲಿ ಪಾದಚಾರಿಗಳಿಗೆ ಮಾರ್ಗವಿಲ್ಲದೆ ಪರಾದಾಟ: ಮುನಿರತ್ನ ಅವರೇ ಇತ್ತ ನೋಡಿ



ಬೆಂಗಳೂರು: ನಗರದಲ್ಲಿ ಕಳೆದ ಅನೇಕ ದಿನಗಳಿಂದ 'ರಾಜರಾಜೇಶ್ವರಿ ನಗರದ ಕಮಾನು ಮುಂಭಾಗದಲ್ಲಿ ಪಾದಚಾರಿಗಳಿಗೆ ಮಾರ್ಗವಿಲ್ಲದೆ ಪರಾದಾಟ' ಇದು ರಾಜರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣದಿಂದ ಕೊಗಳತೆ ದೊರದಲ್ಲಿ ಇರುವ ಚಾರಿ ಮಾರ್ಗದ ಮೇಲೆ ಅನಾಥವಾಗಿ ಒಂದು ದೊಡ್ಡ ಕಂಬ ಬಿದಿದ್ದು, ಪಾದಚಾರಿಗಳು ಇತ್ತ ಪಾದಾಚಾರಿ ಮಾರ್ಗವೂ ಇಲ್ಲದೆ, ಅತ್ತ ರಸ್ತೆಯ ತುಂಬಾ ವಾಹನಗಳ ದಟ್ಟಣೆಯ ನಡುವೆ ಕೆಲಸಕ್ಕೆ ಹೋಗುವ ಜನರು ಹಾಗೂ ಶಾಲಾ- ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಅನಾಥವಾಗಿ ಬಿದ್ದಿರುವ ಕಂಬ ನೋಡಿ ಹಿಡಿ ಶಾಪ ಹಾಕುತ್ತ ಸಾಗುತ್ತಿದ್ದ ದೃಶ್ಯ ಕಂಡು ಬಂತು.


ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಬಿಬಿಎಂಪಿ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕ, ಸಚಿವರಾದ ಮುನಿರತ್ನ ಅವರೇ ಇತ್ತ ನೋಡಿ!! ಪಾದಚಾರಿಗಳಿಗೆ ಮಾರ್ಗವಿದ್ದೂ ಇಲ್ಲದಂತಾಗಿದ್ರೆ ಅತ್ತ ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶನ ಮಾಡುತ್ತಾ ಇರುವುದು ವಿಪರ್ಯಾಸವೇ ಸರಿ.


ಸ್ಥಳೀಯರ ದೊರು: 

ರಾಜರಾಜೇಶ್ವರಿ ನಗರದ ಕಮಾನು ಮುಂಭಾಗದಲ್ಲಿ ನಾಗರೀಕರಿಗೆ ಪಾದಚಾರಿ ಮಾರ್ಗ ದಲ್ಲಿ ನಡೆದು ಹೋಗಲು ಅವಕಾಶ ಇಲ್ಲದೆ  ಓಡಾಡಲು ಕಷ್ಟಪಟ್ಟು ಸಾಗುತ್ತಿದ್ದರು, ಆದರೆ ಸಂಬಂಧ ಪಟ್ಟ ಬಿಬಿಎಂಪಿ ಇಲಾಖೆ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೆ ಇಲ್ಲ ಅನ್ನುವ ಹಾಗೇ ಇದ್ದಾರೆ ಎಂಬುದು ಸ್ಥಳೀಯರ ದೊರು. 

ಮುಂದಿನ ಚುನಾವಣಾ ತಯಾರಿಯಲ್ಲಿ ಬಿಬಿಎಂಪಿ- ರಾಜ್ಯ ಸರ್ಕಾರ?

ಪ್ರಾಯಶಃ ಮುಂಬರುವ ಬಿಬಿಎಂಪಿ ಚುನಾವಣಾ ತಯಾರಿಯಲ್ಲಿ ಬಿಬಿಎಂಪಿ ಸಂಪೂರ್ಣವಾಗಿ ಬ್ಯುಸಿ ಆಗಿರಬಹುದು? ಹಾಗೂ ರಾಜ್ಯ ಸರ್ಕಾರ ಮುಂದಿನ ಚುನಾವಣೆಯ ಮತ ಲೆಕ್ಕ ಹಾಕುವುದರಲ್ಲಿ ಬ್ಯುಸಿ ಆಗಿರಬಹುದು, ಆದರೆ ಪಾದಚಾರಿ ಮಾರ್ಗವಿದ್ದರೂ ಪಾದಚಾರಿಗಳು ರಸ್ತೆಯ ಮಧ್ಯದಲ್ಲಿ ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಆರ್ ಆರ್. ನಗರದಲ್ಲಿ. ಹೆಚ್ಚಿನ ವಾಹನ ದಟ್ಟಣೆ ಇರುವ ಈ ಸ್ಥಳದಲ್ಲಿ ಅಪಘಾತ ಸಂಭವಿಸುವ ಮುನ್ನ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಎಚ್ಚೆತುಕೊಳ್ಳಲಿ ಎಂದು ಆಶಿಸೋಣ ಅಲ್ಲವೇ?? ಇದು ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯವೈಖರಿ ಎನ್ನೋಣವೇ?? ರಾಜ್ಯ ಸರ್ಕಾರದ ಕಾರ್ಯವೈಖರಿ ಎನ್ನೋಣವೇ?? 

ಚಿತ್ರ, ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ, ಬೆಂಗಳೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم