ಪುತ್ತೂರು: ಕರ್ತವ್ಯಕ್ಕೆ ಹೊರಟು ನಿಂತ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆಯೊಂದು ಮಾರ್ಚ್ 9 ರಂದು ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ.
ಅವರಿಗೆ 42 ವರ್ಷ ವಯಸ್ಸಾಗಿತ್ತು. ಸಂಪ್ಯ ಪೋಲೀಸ್ ಠಾಣೆಯ ಸಿಬ್ಬಂದಿ ಗಣೇಶ್ ಹೃದಯಾಘಾತದಿಂದ ಸಾವಿಗೀಡಾದ ಪೇದೆಯಾಗಿದ್ದು, ಕೇರಳ-ಕರ್ನಾಟಕ ಗಡಿಯಾಗ ಸ್ವರ್ಗ ಎಂಬಲ್ಲಿ ಗಣೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು.
ಇಂದು ಕೂಡಾ ಎಂದಿನಂತೆ ಕರ್ತವ್ಯಕ್ಕೆ ಹೊರಟು ನಿಂತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಗಣೇಶ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.
إرسال تعليق