ಸರಣಿ ಕಾರ್ಯಕ್ರಮಗಳಿಗೆ ಚಾಲನೆ
ಬದಿಯಡ್ಕ: ಯಕ್ಷಗಾನ ಗುರು, ಸಾಮಾಜಿಕ, ಧಾರ್ಮಿಕ ಮುಂದಾಳುಗಳಾಗಿದ್ದ ದಿ.ನೀರ್ಚಾಲು ಪರಮೇಶ್ವರ ಆಚಾರ್ಯ ಅವರ ಹೆಸರಿನಲ್ಲಿ ಪ್ರತಿಷ್ಠಾಪಿತ ಪರಮೇಶ್ವರ ಆಚಾರ್ಯ ಸ್ಮಾರಕ ಕಲಾ ಸೇವಾ ಪ್ರತಿಷ್ಠಾನದ 20ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಒಂದು ವರ್ಷ ಪರ್ಯಂತ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮ ಬದಿಯಡ್ಕದ ರಾಮ್ ಲೀಲಾ ಸಭಾಂಗಣದಲ್ಲಿ ಜರಗಿತು.
ಹಿರಿಯ ಯಕ್ಷಗಾನ ಅರ್ಥಧಾರಿ, ದಸ್ತಾವೇಜು ಬರಹಗಾರರಾದ ಕರಿಂಬಿಲ ಲಕ್ಷ್ಮಣ ಪ್ರಭು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬ್ಲಾಕ್ ಪಂ. ಸದಸ್ಯೆ ಅಶ್ವಿನಿ ಕೆ.ಎಂ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘ ಪ್ರಚಾರಕ್ ನ. ದಾಮೋದರ್ ಪ್ರಸ್ತಾವನೆಗೈದರು. ಯಕ್ಷಗಾನ ಕಲಾವಿದ, ಸಂಘಟಕ ಬಾಲಕೃಷ್ಷ ಆಚಾರ್ಯ ನೀರ್ಚಾಲು ಸ್ವಾಗತಿಸಿ ಸುಬ್ರಹ್ಮಣ್ಯ ಆಚಾರ್ಯ ನೀರ್ಚಾಲು ವಂದಿಸಿದರು.
ಬಳಿಕ "ಸುಧನ್ವ ಮೋಕ್ಷ" ಎಂಬ ಯಕ್ಷಗಾನ ತಾಳಮದ್ದಲೆ ಜರಗಿತು. ಹಿಮ್ಮೇಳದಲ್ಲಿ ಶ್ರೀಹರಿ ಹೊಳ್ಳ ಮಧೂರು, ತಲ್ಪಣಾಜೆ ಶಿವಶಂಕರ ಭಟ್, ಅಂಬೆಮೂಲೆ ಶಿವಶಂಕರ ಭಟ್, ಉದಯ ಕಂಬಾರ್, ವೇಣುಗೋಪಾಲ ಪಡ್ರೆ, ಅರ್ಥಧಾರಿಗಳಾಗಿ ಡಾ.ಬೇ.ಸಿ. ಗೋಪಾಲಕೃಷ್ಣ ಭಟ್, ಬಾಲಕೃಷ್ಣ ಆಚಾರ್ಯ, ವಾಮನ ಆಚಾರ್ಯ ಬೋವಿಕ್ಕಾನ, ಕರಿಂಬಿಲ ಲಕ್ಷ್ಮಣ ಪ್ರಭು, ಪೆರ್ವ ವಿಷ್ಣು ಪ್ರಕಾಶ ಸಹಕರಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment