ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ಎ.ಪಿ.ಮಾಲತಿ, ಲಕ್ಷ್ಮಿರಾವ್ ಆರೂರು, ರಾಧಾಬಾಯಿ ನಾರಾಯಣ ಬಾಬು ದತ್ತಿನಿಧಿ ಕಾರ್ಯಕ್ರಮ'

'ಎ.ಪಿ.ಮಾಲತಿ, ಲಕ್ಷ್ಮಿರಾವ್ ಆರೂರು, ರಾಧಾಬಾಯಿ ನಾರಾಯಣ ಬಾಬು ದತ್ತಿನಿಧಿ ಕಾರ್ಯಕ್ರಮ'


ಮಂಗಳೂರು: ಕರಾವಳಿ ಲೇಖಕಿಯರ ವಾಚಕಿಯರ ಸಂಘ ಮಂಗಳೂರು ಹಾಗೂ ಅರಿವು - ಹರಿವು ಟ್ರಸ್ಟ್ ಬಂಟ್ವಾಳ ಇವರ ಸಹಯೋಗದಲ್ಲಿ 'ಎ.ಪಿ.ಮಾಲತಿ, ಲಕ್ಷ್ಮಿರಾವ್ ಆರೂರು, ರಾಧಾಬಾಯಿ ನಾರಾಯಣ ಬಾಬು ದತ್ತಿನಿಧಿ ಕಾರ್ಯಕ್ರಮ'ವು ಉರ್ವಸ್ಟೋರ್ ಸಾಹಿತ್ಯಸದನದಲ್ಲಿ ಇತ್ತೀಚೆಗೆ ನಡೆಯಿತು. 


ಅರಿವು ಹರಿವು ಟ್ರಸ್ಟ್ ನ ಸಂಚಾಲಕ, ಮಾನವತಾವಾದಿ ಶ್ರೀ ನಾದ ಮಣಿನಾಲ್ಕೂರು ಅವರಿಂದ 'ಸಾಹಿತ್ಯ-ಲಿಂಗಸೂಕ್ಷ್ಮತೆ- ಪ್ರತಿರೋಧ: ಮಾತು, ಕವಿತೆ, ಹಾಡು' ವಿಶಿಷ್ಟ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.


ಹಿರಿಯ ಲೇಖಕಿ ಎ.ಪಿ. ಮಾಲತಿ, ಡಾ. ಅನಸೂಯ ಸಾಲಿಯಾನ್, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಬಿ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ದತ್ತಿನಿಧಿ ಕಾರ್ಯಕ್ರಮದ ಅಂಗವಾಗಿ ಉದಯೋನ್ಮುಖ ಲೇಖಕಿಯರಿಗೆ ಆಯೋಜಿಡಿದ್ದ ಸಣ್ಣಕಥಾ ಸ್ಪರ್ಧೆಯ  ವಿಜೇತರಾದ ಡಾ.ಸರಸ್ವತಿ (ಪ್ರಥಮ) ವಿಜಯಲಕ್ಷ್ಮಿ ಶೆಟ್ಟಿ ಹಾಗೂ ಸುಜಾತಾ ಕೊಡ್ಮಣ್ (ದ್ವಿತೀಯ) ವಿಜಯಲಕ್ಷ್ಮಿ ಭಟ್ ಉಳುವಾನ (ತೃತೀಯ) ಇವರಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.


ಕಲೇವಾ ಅಧ್ಯಕ್ಷೆ ಡಾ. ಜ್ಯೋತಿ ಚೇಳಾಯಿರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಕೃತಿ ಭಟ್ ಆಶಯಗೀತೆ ಹಾಡಿದರು. ಶರ್ಮಿಳಾ ಶೆಟ್ಟಿ ಸ್ವಾಗತಿಸಿದರು. ಕವಿತಾ ಪಕ್ಕಳ ನಿರೂಪಿಸಿ ವಂದಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 Comments

Post a Comment

Post a Comment (0)

Previous Post Next Post