ಸುಳ್ಯ: ಪಿಯುಸಿ ವಿದ್ಯಾರ್ಥಿನಿ ಕೆಲ ವಾರದ ಹಿಂದೆ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆಯೊಂದು ಫೆ. 20ರಂದು ಸಂಭವಿಸಿದೆ.
ಮರ್ಕಂಜ ಗ್ರಾಮದ ಬೇರಿಕೆ ರಮೇಶ ಅವರ ಪುತ್ರಿ ಶ್ರಾವ್ಯಾ (17) ಮೃತ ವಿದ್ಯಾರ್ಥಿನಿ.
ಪುತ್ತೂರಿನ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಶ್ರಾವ್ಯಾ ವಾರದ ಹಿಂದೆ ಮನೆಯಲ್ಲಿ ಹಲ್ಲುಜ್ಜುವ ಟೂತ್‌ಪೇಸ್ಟ್ ಎಂದು ತಪ್ಪಾಗಿ ತಿಳಿದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ್ದಳು.
ಪರಿಣಾಮ ದೇಹದೊಳಗೆ ವಿಷ ಸೇರಿ ಆಕೆ ಅಸ್ವಸ್ಥಗೊಂಡಿದ್ದಳು.
ತಕ್ಷಣ ವಿಷಯ ತಿಳಿದ ಮನೆ ಮಂದಿ ಆಕೆ ಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು.
ಅಲ್ಲಿ ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾಳೆ.
ಆಕೆ ತಂದೆ, ತಾಯಿ, ಸಹೋದರನನ್ನು ಅಗಲಿದ್ದಾಳೆ. ಮೃತರ ತಂದೆ ನೀಡಿದ ದೂರಿನಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق