ಕುಂಬಳೆ: ಇತ್ತೀಚೆಗೆ 'ಚಿಂತನ ಪ್ರಕಾಶನ ಚಿತ್ರದುರ್ಗ' ಇವರು ನಡೆಸಿದ ಗಣಿತ, ವಿಜ್ಞಾನ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ಮುಜುಂಗಾವು ವಿದ್ಯಾಪೀಠದ ಮಕ್ಕಳು ಭಾಗವಹಿಸಿ ಹಲವು ಬಹುಮಾನಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಈ ಬಹುಮಾನಗಳನ್ನು ಇಂದು ಪೂರ್ವಾಹ್ನ (ಫೆ.21) ಶಾಲಾ ಆಡಳಿತಸಮಿತಿ ಅಧ್ಯಕ್ಷರಾದ ಎಸ್.ಎನ್. ರಾವ್ ಮುನ್ನಿಪ್ಪಾಡಿಯವರು ವಿಜೇತರಿಗೆ ಹಸ್ತಾಂತರಿಸಿದರು. ವೇದಿಕೆಯಲ್ಲಿ ಶ್ಯಾಮರಾಜ್ ದೊಡ್ಡಮಾಣಿ, ವಿದ್ಯಾಪೀಠದ ಆಡಳಿತಾಧಿಕಾರಿಗಳಾದ ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಿತ್ರಾಸರಸ್ವತಿ ಪೆರಡಾನ, ಡ್ರಾಯಿಂಗ್ ಅಧ್ಯಾಪಕ ಶ್ರೀಯುತ ಶಿವಾನಂದ ಆಚಾರ್ಯ, ಅಧ್ಯಾಪಿಕೆ ಶ್ರೀಮತಿ ಪ್ರತೀಕ್ಷಾ ಎನ್. ಮೊದಲಾದವರು ಇದ್ದರು.
ಪಾರಿತೋಷಕ ಸ್ವೀಕರಿಸಿದ ಮಕ್ಕಳು:
ಚಿತ್ರಕಲೆ (ರಾಷ್ಟ್ರಮಟ್ಟದ) ಪ್ರಥಮ ಮುರಳಿಕೃಷ್ಣ 9 ನೆ ತರಗತಿ.
ರಾಜ್ಯಮಟ್ಟದಲ್ಲಿ ಆದಿತ್ಯ 7 ನೆ ತರಗತಿ. ದ್ವಿತೀಯ ಭವಿಷ್ 4 ನೆ ತರಗತಿ.
ಜಿಲ್ಲಾಮಟ್ಟದಲ್ಲಿ ರಕ್ಷಾ ಎನ್ 1 ನೆ ತರಗತಿ. ದ್ವಿತೀಯ- ನಿಹಾಲ್ ಸಿ.ಎಚ್.ಎರಡನೇ ತರಗತಿ.
ಪ್ರಜ್ವಿತ ಮೂರನೆ ತರಗತಿ, ಕು| ಧನ್ವಿ 4ನೇ ತರಗತಿ.
ಸೈನ್ಸ್ ಹಾಗೂ ಲೆಕ್ಕ, ಡ್ರಾಯಿಂಗ್ ದೀಪಕ್ 4 ನೆ ತರಗತಿ, ಕೆ.ಎಲ್. ಶ್ರೀದೇವಿ 6 ನೆ ತರಗತಿ.
ಸೈನ್ಸ್ ಸ್ಟೇಟ್ ಲೆವೆಲ್ - ವೇದಾಂತ 4 ನೆ ತರಗತಿ.
ಜಿಲ್ಲಾಮಟ್ಟದ ಸೈನ್ಸ್ -ಶಾಶ್ವತ 3ನೆ ತರಗತಿ., ಜತನ್ ಸಿ.ವಿ. 9ನೆ ತರಗತಿ. ಕಣ್ಣನ್ ಕಾರ್ತಿಕೇಯನ್ 10 ನೆ ತರಗತಿ.
ಲೆಕ್ಕ-ಸ್ಟೇಟ್ ಲೆವೆಲ್. ಶಾಶ್ವತ. ಕೆ. 5 ನೆ ತರಗತಿ.
ಜಿಲ್ಲಾ ಮಟ್ಟದ ಲೆಕ್ಕದಲ್ಲಿ- ಪ್ರಥಮ ವೇದಾಂತರಾವ್ ನಾಲ್ಕನೆ ತರಗತಿ.
ದ್ವಿತೀಯ ಮನೀಷ್ ಕುಮಾರ್.
ಇನ್ನುಳಿದ ಕೆಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತೃತೀಯ ಹಾಗೂ ಸಮಾಧಾನಕರ ಬಹುಮಾನ ಪಡೆದು ಶಾಲೆಗೆ ಹೆಸರು ತಂದಿರುತ್ತಾರೆ.
ವರದಿ- ವಿಜಯಾಸುಬ್ರಹ್ಮಣ್ಯ ಕುಂಬಳೆ. ಗ್ರಂಥ ಪಾಲಿಕೆ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق