ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೋವಿಡ್ ಪರಿಣಾಮ ಕುರಿತು ಉಜಿರೆ ಕಾಲೇಜಿನಲ್ಲಿ ವಿಚಾರ ಸಂಕಿರಣ

ಕೋವಿಡ್ ಪರಿಣಾಮ ಕುರಿತು ಉಜಿರೆ ಕಾಲೇಜಿನಲ್ಲಿ ವಿಚಾರ ಸಂಕಿರಣ


ಉಜಿರೆ: ಶ್ರೀ.ಧ.ಮಂ. ಕಾಲೇಜಿನ ಮನಃಶಾಸ್ತ್ರ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಇದೇ ಫೆಬ್ರವರಿ 28 ರಂದು ಕಾಲೇಜಿನ ಸಮ್ಯಕ್ದರ್ಶನ ಹಾಲ್ ನಲ್ಲಿ "ಕಾಗ್ನಿಟಿವ್ ಫಂಕ್ಶನ್ ನ ಮೇಲೆ ಕೋವಿಡ್-19 ರ ಪರಿಣಾಮಗಳು" ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವು ನಡೆಯಲಿದೆ.


ಕಾಲೇಜಿನ ಮನಃಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥರಾದ ಶ್ರೀ ಗೋಪಾಲ್ ಪಟವರ್ಧನ್ ಸಂಕಿರಣದ ಉದ್ಘಾಟನೆಯನ್ನು ನಡೆಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ. ಉದಯಚಂದ್ರ ಪಿ.ಎನ್, ಮೈಸೂರು ಮಹಾರಾಜಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಲ್ಯಾನ್ಸಿ ಡಿಸೋಜಾ, ಕಾಲೇಜಿನ ವಿಜ್ಞಾನ ವಿಭಾಗದ ಡೀನ್ ಶ್ರೀ ಎಸ್ ಎನ್ ಕಾಕತ್ಕರ್ ಉಪಸ್ಥಿತರಿರುತ್ತಾರೆ.


ಕಾರ್ಯಕ್ರಮವವು ಬೆಳಗ್ಗೆ ೯ ಗಂಟೆಗೆ ಉದ್ಘಾಟನೆಯಿಂದ ಆರಂಭವಾಗಿ ಪ್ರಾಸ್ತಾವಿಕ ನುಡಿ, ವಿವಿಧ ಪ್ರಬಂಧ ಮಂಡನೆ ಹಾಗೂ ಸಮಾರೋಪದೊಂದಿಗೆ ಕಾರ್ಯಕ್ರಮವು ಸಂಜೆ 4 ಗಂಟೆಗೆ ಕೊನೆಯಾಗಲಿದೆ.

0 Comments

Post a Comment

Post a Comment (0)

Previous Post Next Post