ನೆಲಮಂಗಲ: ಸಮೀಪದ ಅಡಕಿಮಾರನಹಳ್ಳಿ ಬಳಿ ಹೆದ್ದಾರಿ ಫ್ಲೈ ಓವರ್ ರಸ್ತೆಯಲ್ಲಿ ಲಾರಿಗಳ ನಡುವೆ ಶನಿವಾರ ಅಪಘಾತ ಸಂಭವಿಸಿದೆ.
ನೆಲಮಂಗಲ ಬೆಂಗಳೂರು ರಸ್ತೆಯಲ್ಲಿ ಕಿ.ಮೀಟರ್ ದೂರದವರೆಗೂ ಸಂಚಾರ ಅಸ್ತವ್ಯಸ್ತ ಗೊಂಡಿತು.
ಒಂದು ಲಾರಿ ಪಲ್ಟಿಯಾಗಿ, ಇನ್ನೊಂದು ಫ್ಲೈ ಓವರ್ ತಡೆಗೋಡೆಗೆ ಬಂದಿದ್ದು, ಲಾರಿಗಳ ಈ ಅಪಘಾತದಿಂದ ಎರಡು ಬದಿಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಬಂದು ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ. ಎರಡು ಲಾರಿಗಳ ತೆರವಿಗೆ ನೆಲಮಂಗಲಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
Post a Comment