ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಷ್ಟ್ರಪತಿ ಭವನದ ಮುಘಲ್ ಗಾರ್ಡನ್‌ಗೆ ಆ ಹೆಸರು ಇನ್ನೂ ಯಾಕೆ ಬೇಕು?

ರಾಷ್ಟ್ರಪತಿ ಭವನದ ಮುಘಲ್ ಗಾರ್ಡನ್‌ಗೆ ಆ ಹೆಸರು ಇನ್ನೂ ಯಾಕೆ ಬೇಕು?


ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಮತ್ತು ಉ ಪ್ರ ದ ಯೋಗಿ ಆದಿತ್ಯನಾಥರು ಅನ್ಯಧರ್ಮೀಯ ದೊರೆಗಳ ದಾಸ್ಯದ ಸಂಕೇತವಾಗಿದ್ದ ಅನೇಕ ಸ್ಥಳಗಳ ಹೆಸರು ಬದಲಾಯಿಸಿದ್ರು. ಆದರೆ ತಮ್ಮ ಕಾಲಬುಡದಲ್ಲೇ ಇರೋ ಮುಘಲ್ ಗಾರ್ಡನ್ ಹೆಸರು ಯಾಕೆ ಇನ್ನೂ ಬದಲಾಯಿಸಿಲ್ಲ? ಅಂತ ಯೋಚಿಸ್ತಾನೇ ಇದ್ದೆ. ಮುಘಲ್ ದೊರೆ ಫಿರೋಝ್ ಶಾ ತುಘ್ಲಕ್ ಮುಘಲ್ ಪರಂಪರೆಯಂತೆ ಅನೇಕ ಗಾರ್ಡನ್ ಗಳನ್ನು ನಿರ್ಮಿಸಿದ ಕಾರಣಕ್ಕೆ ಆ ಹೆಸರು ಇಟ್ಟರು ಅಂತಾರೆ.


ಆದ್ರೆ ದೆಹಲಿ ಮಹಾಭಾರತದ ಇಂದ್ರಪ್ರಸ್ಥ ತಾನೇ? ಅದೂ ಅಲ್ಲದೇ ಇನ್ನೂ ಮುಘಲ್ ಗಾರ್ಡನ್ ಅಂತ ಕರೆಯೋದು ನಾವಿನ್ನೂ ಆ ದಬ್ಬಾಳಿಕೆಯ ದಾಸ್ಯದಿಂದ ಹೊರಬಂದಿಲ್ಲ ಅಂತ ಆಗಲ್ವಾ? ರಾಷ್ಟ್ರದ ಆಡಳಿತದ ಕೇಂದ್ರ ಭಾಗವಾಗಿರುವ ರಾಷ್ಟ್ರಪತಿ ಭವನದ ಮುಘಲ್ ಗಾರ್ಡನ್ ಗೂ ಪಾಂಡವರ ಹೆಸರೋ ಅಥವಾ ಇಂದ್ರಪ್ರಸ್ಥ ಉದ್ಯಾನ ಅಂತಲೋ ಅಥವಾ ನಮ್ಮ ಧೀಮಂತ ಪರಂಪರೆಯನ್ನು ಧ್ವನಿಸುವ, ಗೌರವಿಸುವ ಹೆಸರನ್ನು ಇಟ್ಟರೆ ಒಳ್ಳೆಯದಲ್ಲವೇ?


ಈಗ ಯಾಕೆ ಈ ವಿಚಾರ ಅಂದ್ರೆ ಈ ಮೊಘಲ್ ಗಾರ್ಡನ್ ಇವತ್ತಿಂದ ಕೆಲದಿನಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ತೆರೆದಿರ್ತದೆ ಅಂತ ಮಾಹಿತಿ ಯಾರೋ ಕೊಟ್ರು..ಹಾಗಾಗಿ ಈ ಪ್ರಶ್ನೆ ಮೂಡಿತು.

- ಜಿ ವಾಸುದೇವ ಭಟ್ ಪೆರಂಪಳ್ಳಿ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post